ಶಿಲ್ಲಾಂಗ್: ಮೇಘಾಲಯದ ದಕ್ಷಿಣ ತುರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಕಾನ್ರಾಡ್ ಕೆ ಸಂಗ್ಮಾ ವಿರುದ್ಧ ಬಿಜೆಪಿ ತನ್ನ ರಾಜ್ಯ ಘಟಕದ ಉಪಾಧ್ಯಕ್ಷ ಮತ್ತು ಮಾಜಿ ಬಂಡುಕೋರ ನಾಯಕ ಬರ್ನಾರ್ಡ್ ಎನ್ ಮರಕ್ ಎಂಬುವವರನ್ನು ಅಧಿಕೃತ ಅಭ್ಯರ್ಥಿಯನ್ನಾಗಿ ಗುರುವಾರ ಘೋಷಿಸಿದೆ.

ಕಾನ್ರಾಡ್ ಸಂಗ್ಮಾ ವಿರುದ್ಧ ದನಿಯೆತ್ತಿದ್ದ ಬರ್ನಾರ್ಡ್ ಮರಾಕ್ ಅವರನ್ನು ಕಳೆದ ವರ್ಷ ಬಂಧಿಸಲಾಗಿತ್ತು. ತುರಾದಲ್ಲಿರುವ ಅವರ ಫಾರ್ಮ್ಹೌಸ್ನಲ್ಲಿ ಮಾನವ ಕಳ್ಳಸಾಗಣೆ ಮತ್ತು ವೇಶ್ಯಾಗೃಹವನ್ನು ನಡೆಸುತ್ತಿರುವ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ.

ಕಳೆದ ವರ್ಷ ಅವರ ಫಾರ್ಮ್ಹೌಸ್ನಲ್ಲಿ ಆರು ಅಪ್ರಾಪ್ತ ವಯಸ್ಕರು ಮತ್ತು 500 ಕ್ಕೂ ಹೆಚ್ಚು ಬಳಕೆಯಾಗದ ಕಾಂಡೋಮ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಗಾರೋ ಬುಡಕಟ್ಟು ಜನಾಂಗಕ್ಕೆ ಪ್ರತ್ಯೇಕ ರಾಜ್ಯ ಪಡೆಯುವ ಸಶಸ್ತ್ರ ಉಗ್ರಗಾಮಿ ಗುಂಪು ‘ಅಚಿಕ್ ರಾಷ್ಟ್ರೀಯ ಸ್ವಯಂ ಸೇವಕ ಮಂಡಳಿ’ಯಲ್ಲಿ ಬರ್ನಾರ್ಡ್ ಇದ್ದರು. 2014 ರಲ್ಲಿ ಶಸ್ತ್ರಾಸ್ತ್ರ ತ್ಯಜಿಸಿ, ಸಂಘಟನೆಯನ್ನು ವಿಸರ್ಜಿಸಿದ್ದರು. ಬರ್ನಾರ್ಡ್ ಅವರು ತುರಾ ಜಿಲ್ಲಾ ಪರಿಷತ್ ಸದಸ್ಯರೂ ಆಗಿದ್ದಾರೆ.

ಬಿಜೆಪಿಯು ಮೇಘಾಲಯ ವಿಧಾನಸಭೆಯ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಗುರುವಾರ ತನ್ನ ಎಲ್ಲಾ ಅಭ್ಯರ್ಥಿಗಳನ್ನೂ ಬಿಜೆಪಿ ಪ್ರಕಟಿಸಿದೆ. ಅದರಲ್ಲಿ ಬರ್ನಾರ್ಡ್ ಅವರ ಹೆಸರೂ ಇದೆ.

ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ‘ನ್ಯಾಷನಲ್ ಪೀಪಕ್ಸ್ ಪಾರ್ಟಿ’ಯನ್ನು ಒಳಗೊಂಡ ‘ಮೇಘಾಲಯ ಡೆಮಾಕ್ರಟಿಕ್ ಅಲಯನ್ಸ್’ನಿಂದ ಕಳೆದ ತಿಂಗಳು ಬಿಜೆಪಿ ಬೇರ್ಪಟ್ಟಿತ್ತು. ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿತ್ತು.

ಇವುಗಳನ್ನೂ ಓದಿ

ಮೇಘಾಲಯದಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ ಬಿಜೆಪಿ ನಾಯಕ ಪರಾರಿ: ಪೊಲೀಸರಿಂದ ಶೋಧ

ಮೇಘಾಲಯ: ಸಚಿವ, ನಾಲ್ವರು ಶಾಸಕರು ರಾಜೀನಾಮೆ

ನರೇಗಾ: ಕನಕಪುರ ತಾಲ್ಲೂಕಿಗೆ ಮೇಘಾಲಯ ರಾಜ್ಯದ ಅಧಿಕಾರಿಗಳ ತಂಡ ಭೇಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.