ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

9 ವರ್ಷಗಳಿಂದ ಬಿಜೆಪಿ ಜನರನ್ನು ಲೂಟಿ ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ ಆಕ್ರೋಶ

Published : 29 ಮೇ 2023, 9:26 IST
Last Updated : 29 ಮೇ 2023, 9:26 IST
ಫಾಲೋ ಮಾಡಿ
Comments

ನವದೆಹಲಿ: 9 ವರ್ಷ ಪೂರ್ಣಗೊಳಿಸಿದ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಾಗ್ದಾಳಿ ನಡೆಸಿದ್ದಾರೆ.

ಹಣದುಬ್ಬರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದೆ ಜನರ ಹಣವನ್ನು ಲೂಟಿ ಮಾಡುತ್ತಿದೆ. ಮಾತ್ರವಲ್ಲ ಈ ಬಗ್ಗೆ ಅಹಂಕಾರದಿಂದ ಮಾತನಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ‘ ಭಾರೀ ಹಣದುಬ್ಬರದಿಂದಾಗಿ ಕಳೆದ 9 ವರ್ಷಗಳಲ್ಲಿ ಜನರ ಆದಾಯವನ್ನು ಬಿಜೆಪಿ ಲೂಟಿ ಮಾಡಿದೆ. ಎಲ್ಲಾ ಪ್ರಮುಖ ವಿಷಯಗಳ ಮೇಲೆ ಜಿಎಸ್‌ಟಿ ಪ್ರಭಾವ ಬೀರಿತು. ಬಜೆಟ್‌ ಅನ್ನು ಹಾಳು ಮಾಡಿತು. ಜನ ಜೀವನ ಕಷ್ಟವಾಗಿಸಿತು‘ ಎಂದು ಅವರು ಬರೆದುಕೊಂಡಿದ್ದಾರೆ.

‘ಹಣದುಬ್ಬರ ಅನುಭವಕ್ಕೆ ಬರುತ್ತಿಲ್ಲ. ನಾವು ದುಬಾರಿ ವಸ್ತುಗಳನ್ನು ತಿನ್ನುವುದಿಲ್ಲ ಎಂದು ಅಹಂಕಾರಯುತವಾಗಿ ಮಾತನಾಡುತ್ತಾರೆ. ಅಚ್ಚೇ ದಿನದಿಂದ ಅಮೃತಕಾಲದವರೆಗಿನ ಪ್ರಯಾಣ ಜನರಿಂದ ಲೂಟಿ ಮಾಡುವ ಪ್ರಮಾಣವನ್ನು ಹೆಚ್ಚಿಸಿದೆ‘ ಎಂದು ಅವರು ಆಕ್ರೋಶಿತರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT