ನವದೆಹಲಿ: ನೈರುತ್ಯ ದೆಹಲಿಯಲ್ಲಿರುವ ನಜಾಫಗಢವನ್ನು ನಹಾರ್ಗಢವನ್ನಾಗಿ ಬದಲಿಸುವ ಪ್ರಸ್ತಾಪವನ್ನು ಬಿಜೆಪಿ ಶಾಸಕ ನೀಲಂ ಪಹಲ್ವಾನ್ ಗುರುವಾರ ಮುಂದಿಟ್ಟಿದ್ದಾರೆ.

ಮೂಲ ಹೆಸರನ್ನು ಮೊಘಲರು ಬದಲಾಯಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
.ದೆಹಲಿ ವಿಧಾನಸಭೆ ಪ್ರವೇಶಕ್ಕೆ ಎಎಪಿ ಶಾಸಕರಿಗೆ ನಿರ್ಬಂಧ: ಆತಿಶಿ ಆರೋಪ.
ಇತ್ತೀಚೆಗೆ ನಡೆದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ನಜಾಫಗಢ ಕ್ಷೇತ್ರದಿಂದ ಅವರು ಗೆಲುವು ಸಾಧಿಸಿದ್ದರು.

ಮೊಘಲ್ ದೊರೆ ಎರಡನೇ ಅಲಂ ಆಡಳಿತದಲ್ಲಿ ನಜಾಫಗಢ ಭಾರಿ ಸಮಸ್ಯೆಗಳನ್ನು ಎದುರಿಸಿತ್ತು. 1857ರ ದಂಗೆಯ ವೇಳೆ ರಾಜ ನಹಾರ್ ಸಿಂಗ್ ಯುದ್ಧ ಮಾಡಿ ನಜಾಫಗಢವನ್ನು ದೆಹಲಿ ಪ್ರಾಂತ್ಯಕ್ಕೆ ಸೇರಿಸಿದ. ನಜಾಫಗಢವನ್ನು ನಹಾರ್ಗಢವನ್ನಾಗಿ ಬದಲಿಸಲು ನಾವು ಹಲವು ವರ್ಷಗಳಿಂದ ಪ್ರಯತ್ನಿಸುತ್ತಿದ್ದೇವೆ. ಹೆಸರು ಬದಲಿಸುವ ಪ್ರಸ್ತಾಪವನ್ನು ಕ್ಷೇತ್ರದ ಜನರು ಬೆಂಬಲಿಸಲಿದ್ದಾರೆ ಎನ್ನುವ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
.ದೆಹಲಿ ಅಬಕಾರಿ ನೀತಿ ಹಗರಣ: ಸರ್ಕಾರಕ್ಕೆ ₹2,000 ಕೋಟಿ ನಷ್ಟ.
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಬಳಿಕ ಪ್ರದೇಶಗಳ ಹೆಸರು ಬದಲಿಸುವ ಹೇಳಿಕೆಗಳು ಬಿರುಸು ಪಡೆದಿವೆ. ಮುಸ್ತಫಾಬಾದ್ನಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ ಮೋಹನ್ ಸಿಂಗ್ ಬಿಶ್ತ್, ತಮ್ಮ ಕ್ಷೇತ್ರವನ್ನು ಶಿವಪುರಿ ಅಥವಾ ಶಿವ ವಿಹಾರ ಎಂದು ಬದಲಿಸುವುದಾಗಿ ಹೇಳಿದ್ದರು.
.ದೆಹಲಿ: ಲೆಫ್ಟಿನೆಂಟ್ ಗವರ್ನರ್ ಭಾಷಣದ ವೇಳೆ ಘೋಷಣೆ; ಎಎಪಿಯ 12 ಶಾಸಕರ ಅಮಾನತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.