ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ ಗೆಲುವಿಗಾಗಿ ಪ್ರತಿಪಕ್ಷ ನಾಯಕರಿಗೆ ಜೈಲು: ಮಮತಾ ಬ್ಯಾನರ್ಜಿ

Published 1 ಫೆಬ್ರುವರಿ 2024, 14:40 IST
Last Updated 1 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಶಾಂತಿಪುರ: ‘ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಪ್ರತಿಪಕ್ಷಗಳ ನಾಯಕರನ್ನು ಬಿಜೆಪಿ ಜೈಲಿಗೆ ಹಾಕಿಸುತ್ತಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. 

ಹಣ ಅಕ್ರಮ ವರ್ಗಾವಣೆ ಪ್ರಕರಣ ಸಂಬಂಧ ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ಬಂಧಿಸಿದ ಬೆನ್ನಲ್ಲೇ, ಮಮತಾ ಅವರು ಈ ಹೇಳಿಕೆ ನೀಡಿದ್ದಾರೆ.

ನಾಡಿಯಾ ಜಿಲ್ಲೆಯ ಶಾಂತಿಪುರದಲ್ಲಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನೀವು ಬೆದರಿಸಬಹುದು ಮತ್ತು ಭಾರತದಲ್ಲಿರುವ ಎಲ್ಲರನ್ನೂ ಜೈಲಿಗೆ ಕಳುಹಿಸಬಹುದು. ನನ್ನನ್ನೂ ನೀವು ಜೈಲಿಗೆ ಹಾಕಬಹುದು. ಆದರೆ, ನಾನು ಖಂಡಿತವಾಗಿಯೂ ಹೊರಗೆ ಬರುತ್ತೇನೆ’ ಎಂದು ಹೇಳಿದರು. 

‘ನಮ್ಮೆಲ್ಲರನ್ನು ಕಳ್ಳರು (ಪ್ರತಿಪಕ್ಷಗಳ ನಾಯಕರು) ಹಾಗೂ ನಿಮ್ಮನ್ನು ನೀವು ಸಾಧುಗಳು ಎಂದು ಕರೆದುಕೊಳ್ಳಬಹುದು. ನೀವು ಅಡುಗೆ ಅನಿಲದ ದರವನ್ನು ಹೆಚ್ಚಿಸಿದ್ದೀರಿ. ಗ್ರಾಮೀಣ ಆವಾಸ್ ಯೋಜನೆಯಡಿ ರಸ್ತೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡುತ್ತಿಲ್ಲ. ನೀವು ಕಳ್ಳರ ಜಮೀನ್ದಾರರೇ ಹೊರತು ಬೇರೇನೂ ಅಲ್ಲ. ನಿಮ್ಮ ಕೈಯಲ್ಲಿ ಅಧಿಕಾರವಿದೆ ಎಂಬ ಕಾರಣಕ್ಕೆ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದ್ದೀರಾ. ನಾಳೆ ಏನಾಗಲಿದೆ’ ಎಂದು ಪ್ರಶ್ನಿಸಿದರು. 

ಅಲ್ಲದೆ, ಬಿಜೆಪಿಯು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಹೇರುವುದಾಗಿ ಹೆದರಿಸುತ್ತಿದೆ. ಆದರೆ, ಎನ್ಆರ್‌ಸಿ ಜಾರಿಯಾಗುವುದಕ್ಕೆ ಬಿಡುವುದಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಬಿಜೆಪಿ ಸುಳ್ಳು ಹೇಳುತ್ತಿದೆ. ಇವೆಲ್ಲವೂ ಅವರ ರಾಜಕೀಯ ಆಟಗಳು ಎಂದು ಟೀಕಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT