ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯನ್ನು ಟರ್ಮಿನೇಟರ್‌ ಸಿನಿಮಾಕ್ಕೆ ಹೋಲಿಸಿ ಪೋಸ್ಟರ್ ಹಂಚಿಕೊಂಡ ಬಿಜೆಪಿ

Published 30 ಆಗಸ್ಟ್ 2023, 10:54 IST
Last Updated 30 ಆಗಸ್ಟ್ 2023, 10:54 IST
ಅಕ್ಷರ ಗಾತ್ರ

ನವದೆಹಲಿ: ಮುಂಬೈನಲ್ಲಿ ನಾಳೆ ವಿಪಕ್ಷಗಳ INDIA ಒಕ್ಕೂಟದ ಸಭೆ ನಡೆಯಲಿದೆ. ಅದಕ್ಕೂ ಮುನ್ನ ಬಿಜೆಪಿ ತನ್ನ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯರನ್ನು ದಿ ಟರ್ಮಿನೇಟರ್‌ (The Terminator) ಸಿನಿಮಾಗೆ ಹೋಲಿಸಿ ಪೋಸ್ಟರ್‌ ಹಂಚಿಕೊಂಡಿದೆ. 

ಪೋಸ್ಟರ್‌ ಮೇಲೆ ನರೇಂದ್ರ ಮೋದಿ ‘ದಿ ಟರ್ಮಿನೇಟರ್‌’ ’2024 ನಾನು ಪುನಃ ಬರುತ್ತೇನೆ’ ಎಂದು ಬರೆಯಲಾಗಿದ್ದು, ‘ಪ್ರತಿಪಕ್ಷಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಬಹುದು ಎಂದು ಭಾವಿಸಿವೆ, ಕನಸು ಆರಂಭವಾಗಲಿ! ಟರ್ಮಿನೇಟರ್‌ ಯಾವಾಗಲೂ ಗೆಲ್ಲುತ್ತಾರೆ’ ಎಂದು ಕ್ಯಾಪ್ಷನ್‌ ನೀಡಿದ್ದಾರೆ.

ಸದ್ಯ ಪೋಸ್ಟರ್‌ ಟ್ವಿಟರ್‌ನಲ್ಲಿ ಸದ್ದು ಮಾಡುತ್ತಿದೆ.

2024ರ ಲೋಕಸಭಾ ಚುನಾವಣೆಯನ್ನು ಎದುರಿಸಲು ಬಿಜೆಪಿ ಮತ್ತು ಪ್ರತಿಪಕ್ಷಗಳ ಒಕ್ಕೂಟವು ತಂತ್ರಗಾರಿಕೆಯನ್ನು ಚುರುಕುಗೊಳಿಸಿವೆ. ಇದೇ ನಿಟ್ಟಿನಲ್ಲಿ INDIA  ಒಕ್ಕೂಟ ಆಗಸ್ಟ್‌ 31 ಮತ್ತು ಸೆಪ್ಟೆಂಬರ್‌ 1 ರಂದು ಮುಂಬೈನಲ್ಲಿ ಸಭೆ ನಡೆಸುತ್ತಿವೆ. ಈ ಸಭೆಯಲ್ಲಿ 26 ಪ್ರತಿಪಕ್ಷಗಳು ಭಾಗಿಯಾಗಲಿವೆ.

ಈ ನಡುವೆ ಮಹಾರಾಷ್ಟ್ರ ಬಿಜೆಪಿ ಕೂಡ ರಾಜ್ಯದ 48 ಲೋಕಸಭಾ ಸೀಟುಗಳಿಗೆ ಎರಡು ದಿನಗಳ ಪರಿಶೀಲನಾ ಸಭೆಯನ್ನು ಆಯೋಜಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT