ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯು ಅಧಿಕಾರ ಗಳಿಸಲು, ಸಮಾಜ ವಿಭಜಿಸಲು ‘ಹಿಂದುತ್ವ’ ಬಳಸುತ್ತಿದೆ: ಅಖಿಲೇಶ್

ನಾವು ನಿಜವಾದ ಹಿಂದುತ್ವ ಉಳಿಸಬೇಕಿದೆ
Published 5 ಆಗಸ್ಟ್ 2023, 23:30 IST
Last Updated 5 ಆಗಸ್ಟ್ 2023, 23:30 IST
ಅಕ್ಷರ ಗಾತ್ರ

ಲಖನೌ: ‘ಅಧಿಕಾರ ಕಬಳಿಸಲು, ಸಮಾಜ ವಿಭಜಿಸಲು ಬಿಜೆಪಿಯು ‘ಹಿಂದುತ್ವ’ ಅಸ್ತ್ರ ಬಳಸುತ್ತಿದ್ದು, ನಾವು ನಿಜವಾದ ಹಿಂದುತ್ವ ಉಳಿಸಬೇಕಾಗಿದೆ’ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಶನಿವಾರ ಹೇಳಿದರು.

ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಯಾದವ್‌ ಅವರು, ಬಿಜೆಪಿಯ ‘ಹಿಂದುತ್ವ’ ಸಮಾಜವನ್ನು ವಿಭಜಿಸುವತ್ತ ಗಮನಹರಿಸಿದೆ. ‘ನಿಜವಾದ ಹಿಂದುತ್ವ’ವನ್ನು ನಿಜವಾದ ಹಿಂದೂಗಳು ಉಳಿಸುವ ಅಗತ್ಯವಿದೆ. ‘ಅಧಿಕಾರಕ್ಕಾಗಿ ಹಿಂದುತ್ವವನ್ನು ದುರುಪಯೋಗಪಡಿಸಿಕೊಂಡ ನಕಲಿ ಹಿಂದೂಗಳಿಂದ ನಾವು ಜನರನ್ನು ರಕ್ಷಿಸಬೇಕಾಗಿದೆ’ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಸವಾಲನ್ನು ‘ಇಂಡಿಯಾ’ ಮತ್ತು ಎಸ್‌ಪಿ ಹೇಗೆ ಎದುರಿಸಲಿವೆ ಎಂದು ಕೇಳಿದ ಪ್ರಶ್ನೆಗೆ, ‘ಬಿಜೆಪಿಯವರು ಸಾಕಷ್ಟು ನಕಲಿ ಎನ್‌ಕೌಂಟರ್‌ಗಳನ್ನು ಮಾಡಿದ್ದಾರೆ. ಅವರು ಸಮಾಜ ವಿಭಜಿಸುವುದನ್ನು ಬಿಟ್ಟು ಬೇರೇನೂ ಮಾಡಿಲ್ಲ. ಜನರು, 2024ರಲ್ಲಿ ಬಿಜೆಪಿ ಸರ್ಕಾರವನ್ನು ಎನ್‌ಕೌಂಟರ್ ಮಾಡುತ್ತಾರೆ’ ಎಂದು ಹೇಳಿದರು.

ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ವು 2024ರಲ್ಲಿ ಉತ್ತರ ಪ್ರದೇಶದಲ್ಲಿ ಪಿಡಿಎ (ಪಿಚ್ಚಾಡೆ (ಹಿಂದುಳಿದವರು), ದಲಿತ, ಅಲ್ಪಸಂಖ್ಯಾತ ) ಬೆಂಬಲದೊಂದಿಗೆ ‘ವಿಭಜಕ’ ಬಿಜೆಪಿ ಸರ್ಕಾರವನ್ನು ಬೇರುಸಹಿತ ಕಿತ್ತೊಗೆಯಲಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶ ರಾಜ್ಯದಲ್ಲಿ ವಿರೋಧ ಪಕ್ಷಗಳ ಮೈತ್ರಿಯ ಭವಿಷ್ಯದ ಕುರಿತ ಮತ್ತೊಂದು ಪ್ರಶ್ನೆಗೆ ಯಾದವ್ ಅವರು, ‘ಇಲ್ಲಿ ಸಮಾಜವಾದಿ ಪಕ್ಷವಿದೆ. ನಮ್ಮ ಮೈತ್ರಿಕೂಟ ಸೇರಲು ಇಚ್ಛಿಸುವ ಹೆಚ್ಚಿನ ಪಕ್ಷಗಳಿಗೆ ಸ್ವಾಗತವಿದೆ’ ಎಂದು ಹೇಳಿದರು.

ಬಿಜೆಪಿಯು ಸಂವಹನ ಮಾಧ್ಯಮವನ್ನು ದುರುಪಯೋಗ ಮಾಡಿಕೊಂಡಿದೆ. ಪ್ರತಿದಿನ ಹೊಸ ಸುಳ್ಳನ್ನು ಸೃಷ್ಟಿಸುತ್ತಿದೆ. ಅವರು ಅಧಿಕಾರಕ್ಕೆ ಬರದಂತೆ ತಡೆಯುವುದು ಅನಿವಾರ್ಯವಾಗಿದ್ದು, ಡಾ. ಭೀಮರಾವ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಉಳಿಸಬೇಕಾಗಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT