ಜೋಧ್‌ಪುರ:‘ರಾಹುಲ್ ಬಾಬಾ ಅವರೇ, ನೀವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ಓದಿರದೇಇದ್ದರೆ ನಾನು ಅದನ್ನು ಇಟಾಲಿಯನ್‌ಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡಬಲ್ಲೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಉದ್ದೇಶಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.

ರಾಜಸ್ಥಾನದಲ್ಲಿ ಸಿಎಎ ಕುರಿತು ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ರಾಹುಲ್ ಬಾಬಾ ಅವರೇ,ನೀವು ಸಿಎಎ ಓದಿದ್ದರೆ ಎಲ್ಲಿಗೆ ಬೇಕಾದರೂ ಚರ್ಚೆಗೆ ಬನ್ನಿ. ಓದಿರದೇಇದ್ದರೆ ನಾನು ಕಾಯ್ದೆಯನ್ನು ಇಟಾಲಿಯನ್‌ಗೆ ಭಾಷಾಂತರಿಸಿ ನಿಮಗೆ ಸಹಾಯ ಮಾಡಬಲ್ಲೆ. ದಯಮಾಡಿ ಅದನ್ನು ಓದಿಕೊಳ್ಳಿ’ ಎಂದು ಶಾ ಕುಟುಕಿದ್ದಾರೆ.

ಇದನ್ನೂ ಓದಿ:ಮೂರು ಕೋಟಿ ಮನೆ ಭೇಟಿ ಗುರಿ: ಬಿಜೆಪಿ ನಾಯಕರ ಸಿಎಎ ಜಾಗೃತಿ ಅಭಿಯಾನ

ಸಿಎಎ ವಿಚಾರದಲ್ಲಿ ಕಾಂಗ್ರೆಸ್ ಮುಸ್ಲಿಮರ ದಾರಿತಪ್ಪಿಸುತ್ತಿದೆ.ವಿಪಕ್ಷಗಳೆಲ್ಲವೂ ಎಷ್ಟೇ ವಿರೋಧಿಸಿದರೂ, ಸಿಎಎ ಅನುಷ್ಠಾನದ ನಿರ್ಧಾರದಿಂದ ಒಂದಿಂಚೂ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಶಾ ಹೇಳಿದ್ದಾರೆ.ಸಿಎಎ ಕುರಿತು ಸುಳ್ಳು ಸುದ್ದಿಯ ಅಭಿಯಾನವನ್ನು ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳು ನಡೆಸುತ್ತಿವೆ. ತಿದ್ದುಪಡಿ ಕಾಯ್ದೆಯು ಯಾರ ಪೌರತ್ವವನ್ನೂ ಕಸಿದುಕೊಳ್ಳುವುದಿಲ್ಲ. ಬದಲಾಗಿ ಪೌರತ್ವವನ್ನು ನೀಡುವ ಕಾಯ್ದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.