ನವದೆಹಲಿ: ಇಂಡಿಯಾ ಟುಡೇ- ಏಕ್ಸಿಸ್ ಮೈ ಇಂಡಿಯಾ ಮತಗಟ್ಟೆ ಸಮೀಕ್ಷೆ ಪ್ರಕಾರ ದೆಹಲಿಯಲ್ಲಿ ಬಿಜೆಪಿ 6-7 ಸೀಟುಗಳನ್ನು ಗೆಲ್ಲಲಿದೆ.
ಕಾಂಗ್ರೆಸ್ 1 ಸೀಟು ಗೆಲ್ಲಲಿದ್ದು, ಆಮ್ ಆದ್ಮಿ ಪಕ್ಷ ಯಾವುದೇ ಸೀಟುಗಳಲ್ಲಿ ಗೆಲುವುಸಾಧಿಸುವುದಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ7 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು.
ನೋಟು ರದ್ದತಿ, ಜಿಎಸ್ಟಿ ಮೊದಲಾದ ವಿಷಯಗಳು ಬಿಜೆಪಿಯ ಗೆಲುವನ್ನು ಬಾಧಿಸಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ ಭಾನುವಾರ ಪ್ರಕಟವಾದ ಬಹುತೇಕ ಮತಗಟ್ಟೆ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೇರಲಿದೆ ಎಂದಿದೆ.