ಲಖನೌ: ಉತ್ತರ ಪ್ರದೇಶದಲ್ಲಿ ಮುಂಬರುವ ವಿಧಾನಸಭೆ ಚುನಾವಣೆವೇಳೆ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕನಿಷ್ಠ ಐದು ಸಾವಿರ ಅಲ್ಪಸಂಖ್ಯಾತರ ಮತಗಳನ್ನು ಗಿಟ್ಟಿಸುವ ಗುರಿಯೊಂದಿಗೆ ಹೊಸ ಯೋಜನೆ ರೂಪಿಸಲು ಬಿಜೆಪಿ ಸಜ್ಜಾಗಿದೆ.

ಮುಸ್ಲಿಂ ಸಮುದಾಯದವರ ಮತಗಳನ್ನು ಕಾಪಾಡಿಕೊಳ್ಳುವುದು ಬಿಜೆಪಿ ಉದ್ದೇಶವಾಗಿದೆ. ಅದಕ್ಕೆ ಅನುಸಾರವಾಗಿ ಪಕ್ಷದ ಸಕ್ರಿಯ ಕಾರ್ಯಕರ್ತರು ತಮ್ಮದೇ ಹೆಸರಿನಲ್ಲಿ ಪಕ್ಷಕ್ಕೆ ಮತ ಗಳಿಸಿಕೊಡುವಂತೆ ಮಾಡಲುಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ತರಬೇತಿ ನೀಡಲಾಗುತ್ತದೆ.

ಪಕ್ಷವು ಪ್ರತಿ ಕ್ಷೇತ್ರದಲ್ಲಿಯೂ50 ಸಕ್ರಿಯ ಮತ್ತು ಪ್ರಬಲ ಕಾರ್ಯಕರ್ತರನ್ನು ಗುರುತಿಸಿ, ಅವರಿಗೆ ತರಬೇತಿ ನೀಡಲಿದೆ.ಜೊತೆಗೆ ಕನಿಷ್ಠ ನೂರು ಮತಗಳನ್ನು ಪಕ್ಷಕ್ಕೆ ಹಾಕಿಸುವ ಗುರಿಯನ್ನು ನೀಡಲಾಗುತ್ತದೆ.

ಪಕ್ಷವು ಪ್ರತಿಯೊಂದು ಕ್ಷೇತ್ರದಲ್ಲಿ 5 ಸಾವಿನ ಮುಸ್ಲೀಮರ ಮತಗಳನ್ನು ಗುರಿಯಾಗಿರಿಸಿರುವುದು ಏಕೆ ಎಂದು ಕೇಳಲಾದ ಪ್ರಶ್ನೆಗೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ಜಮಾಲ್ ಸಿದ್ದಿಕಿ ಪ್ರತಿಕ್ರಿಯಿಸಿದರು. ಅವರು, ನಾವು ಕಳೆದ ಚುನಾವಣೆಯ ಫಲಿತಾಂಶವನ್ನುವಿಶ್ಲೇಷಿಸಿದ್ದೇವೆ. ಬಹುತೇಕ ಶೇ.20ರಷ್ಟು ಕ್ಷೇತ್ರಗಳಲ್ಲಿ5,000ಕ್ಕಿಂತ ಕಡಿಮೆ ಮತಗಳ ಅಂತರದಿಂದ ಸೋಲು ಕಂಡಿದ್ದೇವೆ. ಪಶ್ಚಿಮ ಬಂಗಾಳದಲ್ಲಿಯೂ ಕಡಿಮೆ ಅಂತರದಲ್ಲಿ ಗಣನೀಯ ಸಂಖ್ಯೆಯ ಸ್ಥಾನಗಳಲ್ಲಿ ಸೋತಿದ್ದೇವೆʼ ಎಂದಿದ್ದಾರೆ.

ಮುಂದುವರಿದು,ಅಲ್ಪಸಂಖ್ಯಾತ ಮೋರ್ಚಾವು ಉತ್ತರ ಪ್ರದೇಶದಲ್ಲಿ ಶೇ.60 ರಷ್ಟು ಮುಸ್ಲಿಂ ಮತದಾರರುಇರುವ50 ಕ್ಷೇತ್ರಗಳನ್ನು ಗುರುತಿಸಿದ್ದು,ಈ ಸಮುದಾಯದವರಿಗೆ ಟಿಕೆಟ್‌ನೀಡುವ ಬಗ್ಗೆ ಚಿಂತನೆ ನಡೆದಿದೆಎಂದು ಹೇಳಿದ್ದಾರೆ.

ʼನಮಗೆ ಬೆಂಬಲ ನೀಡುವುದು ನಮ್ಮ ಸಮುದಾಯದವರ ಜವಾಬ್ದಾರಿಯಾಗಿದೆ. ನಾವು ಪಕ್ಷದಿಂದ ಹೆಚ್ಚಿನ ಪ್ರಾತಿನಿಧ್ಯವನ್ನು ಬಯಸುತ್ತೇವೆಯಾದರೂ, ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುವುದುನಮ್ಮ ಸಮುದಾಯದವರ ಕರ್ತವ್ಯವಾಗಿದೆʼ ಎಂದೂ ಅಭಿಪ್ರಾಯಪಟ್ಟಿದ್ದಾರೆ.

403ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ ಮುಂದಿನ ವರ್ಷಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.