ಕೊಚ್ಚಿ: ತ್ಯಾಜ್ಯ ಘಟಕದಲ್ಲಿ ಬೆಂಕಿ ಹೊತ್ತಿಕೊಂಡಿರುವುದರಿಂದ ಗಾಳಿಯ ಗುಣಮಟ್ಟ ತೀರಾ ಹದಗೆಟ್ಟಿದ್ದು, ಮನೆಯಿಂದ ಹೊರಬಾರದಂತೆ ಇಲ್ಲಿನ ಬ್ರಹ್ಮಾಪುರಂ ಹಾಗೂ ಸುತ್ತಲಿನ ಪ್ರದೇಶದ ನಿವಾಸಿಗಳಿಗೆ ಕೇರಳ ಸರ್ಕಾರವು ಗುರುವಾರ ಮನವಿ ಮಾಡಿದೆ. ಮನೆಯ ಬಾಗಿಲು ಹಾಗೂ ಕಿಟಕಿಗಳನ್ನು ತೆರೆಯದಂತೆಯೂ ಸೂಚಿಸಿದೆ.

ಮನೆಯ ಹೊರಭಾಗದಲ್ಲಿ ಜಾಗಿಂಗ್ ಹಾಗೂ ವ್ಯಾಯಾಮ ಮಾಡದಂತೆ ಸಲಹೆ ನೀಡಿದ್ದು, ಮನೆಯಿಂದ ಹೊರಗೆ ಹೋಗಲೇಬೇಕಾದ ಅನಿವಾರ್ಯತೆ ಸೃಷ್ಟಿಯಾದರೆ ಕಡ್ಡಾಯವಾಗಿ ಎನ್–95 ಮಾಸ್ಕ್ ಧರಿಸುವಂತೆ ತಿಳಿಸಿದೆ.

ಎರ್ನಾಕುಲಂ ಜಿಲ್ಲಾಡಳಿತವು ಕಲಮಸ್ಸೆರಿ ವೈದ್ಯಕೀಯ ಕಾಲೇಜು ಹಾಗೂ ಜಿಲ್ಲಾ ವೈದ್ಯಾಧಿಕಾರಿಯವರ (ಡಿಎಂಒ) ಕಚೇರಿಯಲ್ಲಿ ಕಂಟ್ರೋಲ್ ಕೊಠಡಿಗಳನ್ನು ತೆರೆದಿದ್ದು, ಇವು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿವೆ. ತ್ಯಾಜ್ಯ ಸುಡುವುದರಿಂದ ಹೊರಸೂಸುವ ವಿಷಕಾರಿ ಹೊಗೆಯಿಂದ ಉಸಿರುಗಟ್ಟುವಿಕೆಯಂತಹ ಸಮಸ್ಯೆ ಕಂಡುಬಂದಲ್ಲಿ ಕೂಡಲೇ ಕಂಟ್ರೋಲ್ ಕೊಠಡಿಗೆ ಕರೆಮಾಡಿ ಮಾಹಿತಿ ನೀಡುವಂತೆಯೂ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.