ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣೆಯಲ್ಲಿ ಪರಾಭವ: ಬಿಎಸ್‌ಪಿ ನೇತಾರನ ಮೇಲೆ ಕಾರ್ಯಕರ್ತರಿಂದಲೇ ಹಲ್ಲೆ

Last Updated 18 ಜೂನ್ 2019, 13:36 IST
ಅಕ್ಷರ ಗಾತ್ರ

ಅಮರಾವತಿ (ಮಹಾರಾಷ್ಟ್ರ): ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಬಗ್ಗೆ ಅವಲೋಕ ಸಭೆಯಲ್ಲಿ ಬಿಎಸ್‌ಪಿ ನೇತಾರನ ಮೇಲೆ ಪಕ್ಷದಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಸೋಮವಾರ ಬಿಎಸ್‌ಪಿಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯದ ಉಸ್ತುವಾರಿ ವಹಿಸಿರುವ ಸಂದೀಪ್ ತಾಜ್ನೆಅವರು ಸಭೆ ಕರೆದಿದ್ದರು.

ತಾಜ್ನೆಅವರು ಸಭಾ ಕೊಠಡಿಯೊಳಗೆ ಬರುತ್ತಿದ್ದಂತೆ ಕಾರ್ಯಕರ್ತರು ಅವರ ಶರ್ಟ್ ಹಿಡಿದು ಎಳೆದಾಡಿದ್ದಾರೆ. ಒಬ್ಬ ವ್ಯಕ್ತಿ ಅವರ ಮೇಲೆ ಪ್ಲಾಸ್ಟಿಕ್ ಕುರ್ಚಿಯಿಂದ ಹೊಡೆದಿದ್ದಾರೆ. ಕಾರ್ಯಕರ್ತರು ಕುರ್ಚಿ ಎತ್ತಿ ಬಿಸಾಡುತ್ತಿದ್ದಂತೆ ತಂಜೆ ಅವರು ಅಲ್ಲಿಂದ ಓಡಿ ಪಾರಾಗಿದ್ದಾರೆ. ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿವೆ.

ಬಿಎಸ್‌ಪಿ ಪಕ್ಷದ ಗೆಲುವಿಗಾಗಿ ನೇತಾರರು ಕೆಲಸ ಮಾಡಿಲ್ಲ ಎಂದು ಕಾರ್ಯಕರ್ತರು ಸಿಟ್ಟುಗೊಂಡಿದ್ದರು.ರಾಜ್ಯದಲ್ಲಿ ಬಿಎಸ್‌ಪಿ 48 ಸೀಟುಗಳಲ್ಲಿ ಸ್ಪರ್ಧಿಸಿದ್ದು ಕನಿಷ್ಠ 15 ಸೀಟುಗಳಲ್ಲಿ ಗೆಲ್ಲುವ ಭರವಸೆ ಇಟ್ಟಿತ್ತು.ಆದರೆ ಬಿಜೆಪಿ ಮತ್ತು ಶಿವಸೇನೆ ಮಹಾರಾಷ್ಟ್ರದಲ್ಲಿ 41 ಸೀಟುಗಳನ್ನು ಗೆದ್ದುಕೊಂಡಿತ್ತು. ಬಿಎಸ್‌ಪಿಗೆ ಇಲ್ಲಿ ಖಾತೆ ತೆರೆಯಲು ಸಾಧ್ಯವಾಗಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT