ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲಹಾಬಾದ್‌ ಇನ್ನು ಪ್ರಯಾಗ್‌ರಾಜ್: ಯೋಗಿ ಆದಿತ್ಯನಾಥ್ ಸಂಪುಟ ಸಮ್ಮತಿ

Last Updated 16 ಅಕ್ಟೋಬರ್ 2018, 9:15 IST
ಅಕ್ಷರ ಗಾತ್ರ

ಲಖನೌ: ಅಲಹಾಬಾದ್‌ನ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸುವ ಪ್ರಸ್ತಾವನೆಗೆ ಉತ್ತರ ಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ.

ಕುಂಭಮೇಳಕ್ಕೂ ಮುನ್ನ ಹೆಸರು ಬದಲಾವಣೆ ಮಾಡುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗಿದೆ. ಅಲಹಾಬಾದ್ ಇನ್ನು ಮುಂದೆ ಪ್ರಯಾಗ್‌ರಾಜ್ ಆಗಲಿದೆ ಎಂಬುದನ್ನು ತಿಳಿಸಲು ಸಂತೋಷಪಡುತ್ತೇನೆ ಎಂದು ಹಿರಿಯ ಸಚಿವ ಸಿದ್ಧಾರ್ಥನಾಥ ಸಿಂಗ್ ತಿಳಿಸಿದರು. ಋಗ್ವೇದ, ಮಹಾಭಾರತ ಮತ್ತು ರಾಮಾಯಣದಲ್ಲೂ ಪ್ರಯಾಗ್‌ರಾಜ್ ಎಂದೇ ಉಲ್ಲೇಖವಾಗಿದೆ ಎಂದೂ ಅವರು ಹೇಳಿದರು.

ಶನಿವಾರ ಅಲಹಾಬಾದ್‌ಗೆ ಭೇಟಿ ನೀಡಿದ್ದ ಯೋಗಿ ಆದಿತ್ಯನಾಥ್, 2019ರ ಕುಂಭಮೇಳಕ್ಕೂ ಮುನ್ನ ಅಲಹಾಬಾದ್‌ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಾಯಿಸುವುದಾಗಿ ತಿಳಿಸಿದ್ದರು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿವೆ.

ಆಗಸ್ಟ್‌ನಲ್ಲಿಮುಘಲ್‌ಸರೈ ರೈಲು ನಿಲ್ದಾಣದ ಹೆಸರನ್ನು ದೀನ್‌ ದಯಾಳ್‌ ಉಪಾಧ್ಯಾಯ ಜಂಕ್ಷನ್‌ ಎಂದು ಬದಲಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT