ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

IAF Su-30MKI ಯುದ್ಧ ವಿಮಾನಕ್ಕೆ HALನಿಂದ 240 ಎಂಜಿನ್: ಸಂಪುಟ ಸಮಿತಿ ಅಸ್ತು

Published 2 ಸೆಪ್ಟೆಂಬರ್ 2024, 16:05 IST
Last Updated 2 ಸೆಪ್ಟೆಂಬರ್ 2024, 16:05 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ವಾಯುಪಡೆಯಲ್ಲಿರುವ ಸುಖೋಯ್–30ಎಂಕೆಐ ಯುದ್ಧ ವಿಮಾನಕ್ಕೆ ಅಗತ್ಯವಿರುವ 240 ಏರೊ ಎಂಜಿನ್‌ಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್‌ ಲಿಮಿಟೆಡ್‌ನಿಂದ ಖರೀದಿಸುವ ಪ್ರಸ್ತಾವಕ್ಕೆ ಕೇಂದ್ರ ಸಂಪುಟ ಸಮಿತಿ ಸೋಮವಾರ ಒಪ್ಪಿಗೆ ಸೂಚಿಸಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಈ ಕುರಿತು ಪ್ರಕಟಣೆ ನೀಡಿರುವ ಸಚಿವಾಲಯ, ‘₹26 ಸಾವಿರ ಕೋಟಿ ಮೊತ್ತದ ವಹಿವಾಟು ಇದಾಗಿದ್ದು, ಎಂಜಿನ್‌ಗಳ ಹಸ್ತಾಂತರ 2025ರಿಂದ ಆರಂಭವಾಗಿ ಮುಂದಿನ ಎಂಟು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದಿದೆ.

‘ಸು–30ಎಂಕೆಐ ಭಾರತೀಯ ವಾಯುಸೇನೆಯಲ್ಲಿರುವ ಅತ್ಯಂತ ಶಕ್ತಿಶಾಲಿ ಫೈಟರ್ ಜೆಟ್‌ ಆಗಿದೆ. ಇದಕ್ಕೆ ಅಗತ್ಯವಿರುವ ಎಎಲ್‌–31ಎಫ್‌ಪಿ ಎಂಬ ಏರೊ ಎಂಜಿನ್‌ಗಳನ್ನು ಖರೀದಿಸುವ ಕುರಿತು ರಕ್ಷಣಾ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಒಟ್ಟು 240 ಎಂಜಿನ್‌ಗಳಿಗೆ ತೆರಿಗೆ ಹಾಗೂ ಇನ್ನಿತರ ಸುಂಕ ಸೇರಿ ಒಟ್ಟು ₹26 ಸಾವಿರ ಕೋಟಿಯಾಗಲಿದೆ’ ಎಂದು ಹೇಳಿದೆ.

‘ಈ ಎಎಲ್‌–31ಎಫ್‌ಪಿ ಎಂಜಿನ್‌ ಭಾರತದಲ್ಲಿ ತಯಾರಾಗುತ್ತಿದ್ದು, ಇದರಲ್ಲಿ ಶೇ 54ರಷ್ಟು ಸ್ವದೇಶಿ ಉಪಕರಣಗಳಿವೆ. ಈ ಎಂಜಿನ್‌ ಎಚ್‌ಎಎಲ್‌ನ ಕೋರಾಪುಟ್ ವಿಭಾಗದಲ್ಲಿ ತಯಾರಾಗಲಿದೆ’ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT