ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರಗೊಂಡ ದಲಿತರಿಗೆ ಎಸ್‌ಸಿ ಸ್ಥಾನಮಾನ: ದಲಿತ ಸಂಘಟನೆ ವಿರೋಧ

Last Updated 9 ಅಕ್ಟೋಬರ್ 2022, 16:11 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಂ ಮತ್ತು ಕ್ರಿಶ್ಚಿಯನ್‌ ಧರ್ಮಕ್ಕೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ ನೀಡುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ಭಾನುವಾರ ಅಭಿಯಾನ ಆರಂಭಿಸಿವೆ.

ಮತಾಂತರಗೊಂಡಿರುವ ದಲಿತರಿಗೆ ಎಸ್‌ಸಿ ಸ್ಥಾನಮಾನ ನೀಡಬೇಕೊ ಬೇಡವೊ ಎಂಬುದರ ಕುರಿತು ಪರಾಮರ್ಶೆ ನಡೆಸುವುದಕ್ಕಾಗಿ ಕೇಂದ್ರ ಸರ್ಕಾರವು ಆಯೋಗವೊಂದನ್ನು ರಚಿಸಿತ್ತು. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣ ಅವರನ್ನು ಇದರ ಮುಖ್ಯಸ್ಥರನ್ನಾಗಿ ನೇಮಿಸಿತ್ತು. ಇದನ್ನು ವಿರೋಧಿಸಿ ನ್ಯಾಷನಲ್‌ ಕಾನ್ಫೆಡರೇಷನ್‌ ಆಫ್‌ ದಲಿತ್ ಆ್ಯಂಡ್‌ ಆದಿವಾಸಿ ಆರ್ಗನೈಸೇಷನ್‌ (ಎನ್‌ಎಸಿಡಿಎಒಆರ್‌) ಅಭಿಯಾನ ಕೈಗೊಂಡಿದೆ.

‘ಮತಾಂತರಗೊಂಡಿರುವ ದಲಿತರನ್ನು ಪರಿಶಿಷ್ಟ ಜಾತಿಗೆ ಸೇರ್ಪಡೆ ಮಾಡುವುದು 1932ರ ಪೂನಾ ಒಪ‍್ಪಂದಕ್ಕೆ ವಿರುದ್ಧವಾದ ನಡೆಯಾಗಲಿದೆ. ಪೂನಾ ಒಪ್ಪಂದವು ಮಹಾತ್ಮ ಗಾಂಧೀಜಿ ಮತ್ತು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ನಡುವೆ ನಡೆದಿತ್ತು. ಅದರಲ್ಲಿ ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಪಾಲ್ಗೊಂಡಿರಲಿಲ್ಲ’ ಎಂದುಎನ್‌ಎಸಿಡಿಎಒಆರ್‌ನ ಮುಖ್ಯಸ್ಥ ಅಶೋಕ್‌ ಭಾರ್ತಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT