ಇಟಾನಗರ: ಅರುಣಾಚಲ ಪ್ರದೇಶ ದೇಶದಲ್ಲೇ ಅತಿದೊಡ್ಡ ಇಂಗಾಲದ ಆಗರವಾಗಿದೆ ಎಂದು ಮುಖ್ಯಮಂತ್ರಿ ಪೇಮಾ ಖಂಡು ಬುಧವಾರ ತಿಳಿಸಿದ್ದಾರೆ.

ಅರುಣಾಚಲ ದೇಶಕ್ಕೆ ಶೇ.14.38ರಷ್ಟು ಪ್ರತಿಶತ ಕೊಡುಗೆ ನೀಡುತ್ತದೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಶೇ 79ರಷ್ಟು ಅರಣ್ಯ ವ್ಯಾಪ್ತಿಯೊಂದಿಗೆ ರಾಜ್ಯವು ಪ್ರಸ್ತುತ 1,021 ಮಿಲಿಯನ್ ಟನ್ ಇಂಗಾಲದ ಸಂಗ್ರಹವನ್ನು ಹೊಂದಿದೆ, ಇದು ದೇಶದಲ್ಲಿ ಅತಿ ಹೆಚ್ಚು ಎಂದು ಪೇಮಾ ಖಂಡು ಹೇಳಿದ್ದಾರೆ.

ಹವಾಮಾನ ಬದಲಾವಣೆಯ ಪರಿಣಾಮಗಳು ಗೋಚರಿಸುತ್ತಿದ್ದು ಹಸಿರುಮನೆ ಪರಿಣಾಮ ಎದುರಿಸುವುದು ಇಂದಿನ ಅಗತ್ಯ ಎಂದು ಹೇಳಿದರು.

ರಾಜ್ಯದಲ್ಲಿ ದಟ್ಟವಾದ ಅರಣ್ಯ ಸಂಪತ್ತು, ಉಷ್ಣವಲಯದ ಮಳೆಕಾಡುಗಳು ಮತ್ತು ಆಲ್ಪೈನ್ ಅರಣ್ಯಗಳು ವ್ಯಾಪಿಸಿರುವುದರಿಂದ ಇವು ವಾತಾವರಣದಲ್ಲಿರುವ ಇಂಗಾಲದ ಡೈಆಕ್ಸೈಡ್ನ ದೊಡ್ಡ ಪ್ರಮಾಣದಲ್ಲಿ ಹೀರಿಕೊಳ್ಳುತ್ತವೆ, ಇವು ಜಾಗತಿಕ ತಾಪಮಾನವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.