ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗೊ ಹಡಗು ಮುಳುಗಡೆ: ಭಾರತೀಯರೂ ಸೇರಿ 13 ಮಂದಿ ನಾಪತ್ತೆ

Published 26 ನವೆಂಬರ್ 2023, 14:38 IST
Last Updated 26 ನವೆಂಬರ್ 2023, 14:38 IST
ಅಕ್ಷರ ಗಾತ್ರ

ಅಥೇನ್ಸ್‌: ಉಪ್ಪು ಸಾಗಿಸುತ್ತಿದ್ದ ಹಡಗೊಂದು ಭಾನುವಾರ ಗ್ರೀಸ್‌ನ ಲೆಸ್‌ಬೋಸ್‌ ದ್ವೀಪದ ಬಳಿ ಮುಳುಗಡೆಯಾಗಿದೆ. ಅದರಲ್ಲಿದ್ದ 14 ಸಿಬ್ಬಂದಿಯ ಪೈಕಿ ಒಬ್ಬರನ್ನು ಹೊರತುಪಡಿಸಿ ಇನ್ನೆಲ್ಲರೂ ಕಾಣೆಯಾಗಿದ್ದುದು.ಎಂದು ಗ್ರೀಸ್‌ನ ಕರಾವಳಿ ಕಾವಲುಪಡೆ ಹೇಳಿದೆ.  

ಸಿಬ್ಬಂದಿ ಪೈಕಿ 8 ಮಂದಿ ಈಜಿಪ್ಟ್‌ನವರಾದರೆ, ಮಿಕ್ಕವರು ಸಿರಿಯಾ ಮತ್ತು ಭಾರತೀಯರಾಗಿದ್ದರು ಎಂದು ಹೇಳಲಾಗಿದೆ. 

‘ರ್‍ಯಾಪ್ಟರ್‌’ ಹೆಸರಿನ ಈ ಹಡಗು ಈಜಿಪ್ಟ್‌ನ ಎಲ್ ದೆಖೈಲಾ ಬಂದರಿನಿಂದ ಇಸ್ತಾಂಬುಲ್‌ಗೆ ಯಾನ ಕೈಗೊಂಡಿತ್ತು. ಈ ವೇಳೆ ತಾಂತ್ರಿಕ ತೊಂದರೆ ಉಂಟಾದ ಬಗ್ಗೆ ಹಡಗಿನ ಸಿಬ್ಬಂದಿ ಹೇಳಿದ್ದರು. ನಂತರ, ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿರುವುದಾಗಿ ಹೇಳಿದ್ದಾಗಿಯೂ ಕಾವಲುಪಡೆ ತಿಳಿಸಿದೆ.  

ಒಬ್ಬ ಸಿಬ್ಬಂದಿಯುನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ. ಅವರನ್ನು ಏರ್‌ಲಿಫ್ಟ್‌ ಮಾಡಲಾಗಿದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT