ನವದೆಹಲಿ: ಸಿಬಿಎಸ್ಇ 10 ಮತ್ತು 12ನೇ ತರಗತಿಗೆ ಪ್ರಧಾನ 29 ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಿದೆ. ಮುಂದಿನ ಶಿಕ್ಷಣ ಪಡೆಯಲು ಬೇಕಾಗಿರುವ ಮತ್ತು ಉತ್ತೀರ್ಣಗೊಳ್ಳಲು ಅತ್ಯಗತ್ಯವಾಗಿರುವ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಹೇಳಿದ್ದಾರೆ.