ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಿದ್ಧ ಬಾಣಸಿಗ, ನಿರ್ಮಾಪಕ ನೌಶಾದ್‌ ನಿಧನ

Last Updated 27 ಆಗಸ್ಟ್ 2021, 10:32 IST
ಅಕ್ಷರ ಗಾತ್ರ

ಪತ್ತನಂತಿಟ್ಟ(ಕೇರಳ): ‘ಪ್ರಸಿದ್ಧ ಬಾಣಸಿಗ ಮತ್ತು ಮಲಯಾಳಂ ಸಿನಿಮಾ ನಿರ್ಮಾಪಕ ನೌಶಾದ್‌ ಅವರು (54) ದೀರ್ಘಕಾಲದ ಅನಾರೋಗ್ಯದಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾದರು.

ಮೂರು ವರ್ಷಗಳಿಂದ ವಿವಿಧ ಆಸ್ಪತ್ರೆಗಳಲ್ಲಿ ಉದರ ಸಂಬಂಧಿ ಕಾಯಿಲೆಗಳಿಗೆ ಅವರು ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ಮೂಲಗಳು ತಿಳಿಸಿವೆ.

ಆಗಸ್ಟ್‌ 12 ರಂದು ನೌಶಾದ್‌ ಪತ್ನಿ ಶಾಹಿಬಾ ಅವರು ಹೃದಯಾಘಾತದಿಂದ ಸಾವಿಗೀಡಾಗಿದ್ದರು. ನೌಶಾದ್‌ ಅವರಿಗೆ 13 ವರ್ಷದ ಒಬ್ಬರು ಮಗಳಿದ್ದಾರೆ.

ನೌಶಾದ್‌ ನಿಧನಕ್ಕೆ ಕಂಬನಿ ಮಿಡಿದಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ‘ನೌಶಾದ್‌ ಅವರು ಟಿ.ವಿ ಕಾರ್ಯಕ್ರಮಗಳ ಮೂಲಕ ಕೇರಳಿಗರಿಗೆ ವೈವಿಧ್ಯಮಯ ಖಾದ್ಯ ಪರಿಚಯಿಸಿದರು’ ಎಂದರು.

ನೌಶಾದ್‌ ಅವರು ಪ್ರಸಿದ್ಧ ರೆಸ್ಟೋರೆಂಟ್‌ ಮತ್ತು ಕ್ಯಾಟರಿಂಗ್ ಗುಂಪು ‘ನೌಶಾದ್‌ ದಿ ಬಿಗ್‌ ಶೆಫ್‌’ನ ಮಾಲೀಕರಾಗಿದ್ದರು. ರಾಜ್ಯದ ಸೆಲೆಬ್ರಿಟಿಗಳು ಮತ್ತು ವಿಐಪಿ ಅತಿಥಿಗಳಿಗೆ ಸವಿಯಾದ ಖಾದ್ಯಗಳನ್ನು ತಯಾರಿಸಲು ನೌಶಾದ್‌ ಹೆಸರುವಾಸಿಯಾಗಿದ್ದರು. ಅಲ್ಲದೆ ಪ್ರಾದೇಶಿಕ ಚಾನೆಲ್‌ಗಳ ಅಡುಗೆ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅವರು ತೀರ್ಪುಗಾರರು ಆಗಿದ್ದರು.

2005ರಲ್ಲಿ ಮಮ್ಮುಟ್ಟಿ ನಟನೆಯ ‘ಕಾಳ್ಚ’ ಸಿನಿಮಾವನ್ನು ನೌಶಾದ್‌ ನಿರ್ಮಾಣ ಮಾಡಿದ್ದರು. ಈ ಮೂಲಕ ಅವರು ಸಿನಿಮಾ ಜಗತ್ತಿಗೆ ಕಾಲಿಟ್ಟಿದ್ದರು.

ಈ ಬಳಿಕ ಅವರು ‘ಲಯನ್‌’, ‘ಬೆಸ್ಟ್‌ ಆ್ಯಕ್ಟರ್‌’, ‘ಸ್ಪಾನಿಷ್‌ ಮಸಾಲ’ ಸೇರಿದಂತೆ ಇತರೆ ಚಿತ್ರಗಳನ್ನು ನಿರ್ಮಾಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT