ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಂದರ ನಗರ: ಕೇಂದ್ರ ಸರ್ಕಾರದಿಂದ ಸ್ಪರ್ಧೆ

Published 27 ಏಪ್ರಿಲ್ 2023, 16:12 IST
Last Updated 27 ಏಪ್ರಿಲ್ 2023, 16:12 IST
ಅಕ್ಷರ ಗಾತ್ರ

ನವದೆಹಲಿ: ನಗರಗಳನ್ನು ಸ್ವಚ್ಛವೂ ಸುಂದರವೂ ಆಗಿ ಮಾಡುವ ಉದ್ದೇಶದಿಂದ ಕೇಂದ್ರ ವಸತಿ ಹಾಗೂ ನಗರ ವ್ಯವಹಾರಗಳ ಸಚಿವಾಲಯವು ‘ನಗರ ಸೌಂದರ್ಯ ಸ್ಪರ್ಧೆ’ಯನ್ನು ಆಯೋಜಿಸಿದೆ. ಸ್ಥಳೀಯ ಆಡಳಿತವು ತಮ್ಮ ನಗರಗಳನ್ನು ಸುಂದರವಾಗಿಟ್ಟುಕೊಳ್ಳುವುದನ್ನು ಉತ್ತೇಜಿಸಲು ಈ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ನಗರದ ವಾರ್ಡ್‌ಗಳು, ಸಾರ್ವಜನಿಕ ಸ್ಥಳಗಳನ್ನು ಈ ಸ್ಪರ್ಧೆಗೆ ಪರಿಗಣಿಸಲಾಗುವುದು. ಸಾರಿಗೆ ಸೌಲಭ್ಯ, ಮೂಲಸೌಕರ್ಯ, ಸೌಂದರ್ಯ, ಪರಿಸರ ಮತ್ತು ಚಟುವಟಿಕೆಗಳು ಎಂಬ ಐದು ವಿಚಾರಗಳನ್ನು ಪರಿಗಣಿಸಿ ವಾರ್ಡ್‌ಗಳಿಗೆ ಬಹುಮಾನವನ್ನು ನೀಡಲಾಗುವುದು. ಜಲಮೂಲಗಳ ಅಭಿವೃದ್ಧಿ, ಹಸಿರು ಪ್ರದೇಶ, ಪ್ರವಾಸಿ/ಪಾರಂಪರಿಕ ತಾಣಗಳು, ಮಾರುಕಟ್ಟೆ/ವ್ಯಾಪಾರಿ ಸ್ಥಳಗಳು– ಈ ಐದು ವರ್ಗಗಳಲ್ಲಿ ಸಾರ್ವಜನಿಕ ಸ್ಥಳಗಳನ್ನು ಸ್ಪರ್ಧೆಗೆ ಆಯ್ಕೆ ಮಾಡಲಾಗುತ್ತದೆ.

ಜುಲೈ 15ರ ಒಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಸ್ಪರ್ಧೆಯಲ್ಲಿ ಆಯ್ಕೆಯಾದ ವಾರ್ಡ್‌ಗಳಿಗೆ ನಗರ ಹಾಗೂ ರಾಜ್ಯಮಟ್ಟದಲ್ಲಿ ಬಹುಮಾನ ನೀಡಲಾಗುವುದು. ಅದರಂತೆ ಸ್ಪರ್ಧೆಯಲ್ಲಿ ಆಯ್ಕೆಯಾದ ಸಾರ್ವಜನಿಕ ಸ್ಥಳಗಳಿಗೆ ರಾಜ್ಯಮಟ್ಟದಲ್ಲಿ ಬಹುಮಾನ ನೀಡಲಾಗುವುದು. ಹೀಗೆ ಆಯ್ಕೆಯಾದ ವಾರ್ಡ್‌ ಹಾಗೂ ಸಾರ್ವಜನಿಕ ಸ್ಥಳಗಳನ್ನು ರಾಷ್ಟ್ರಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ.

ಈ ಸ್ಪರ್ಧೆಗಾಗಿಯೇ ಸಚಿವಾಲಯವು ವೆಬ್‌ ಪೋರ್ಟಲ್‌ https:// citybeautyco mpetition.in ಅನ್ನು ಬುಧವಾರ ಬಿಡುಗಡೆ ಮಾಡಿದೆ. ಸ್ಪರ್ಧೆಗೆ ನೋಂದಾಯಿಸಲು ಇಚ್ಛೆ ಪಡುವ ಸ್ಥಳೀಯ ಆಡಳಿತವು ತಮ್ಮ ವಾರ್ಡ್‌ಗೆ, ಸಾರ್ವಜನಿಕ ಸ್ಥಳಗಳಿಗೆ ಸಂಬಂಧಿಸಿದ ದಾಖಲೆ, ಫೋಟೊ/ವಿಡಿಯೊಗಳು, ಮಾಹಿತಿ, ಬರಹಗಳನ್ನು ಕಳುಹಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT