ಅಮರಾವತಿ: ಬಾಹ್ಯ ಅನುದಾನಿತ ಯೋಜನೆಗಳಿಗಾಗಿ (ಇಎಪಿ) ವಿದೇಶಿ ಸಂಸ್ಥೆಗಳಿಂದ ಸಾಲವಾಗಿ ಪಡೆದಿರುವ ₹ 960 ಕೋಟಿ ಹಾಗೂ ಈ ಪೈಕಿ ಬಳಕೆಯಾಗದೇ ಉಳಿದಿರುವ ಮೊತ್ತದ ಪ್ರಮಾಣ ಕುರಿತಂತೆ ಸಮಗ್ರ ವರದಿಯನ್ನು ಸಲ್ಲಿಸಬೇಕು ಎಂದು ಕೇಂದ್ರ ಸರ್ಕಾರ ಆಂಧ್ರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಒಂದೆಡೆ, ಆಗಿರುವ ಕಾಮಗಾರಿಗಳ ಸಂಬಂಧ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಬಾಕಿ ಉಳಿದಿದ್ದು, ಕಾಮಗಾರಿಯನ್ನು ಜಾರಿಗೊಳಿಸುತ್ತಿರುವ ಇಲಾಖೆಗಳಿಗೆ ಈ ಕುರಿತಂತೆ ಅಸ್ಪಷ್ಟತೆ ಇದೆ. ಇನ್ನೊಂದೆಡೆ, ಕಾಮಗಾರಿಗಳ ಅನುಷ್ಠಾನ ವಿಳಂಬ ಹಾಗೂ ಬಾಕಿಯನ್ನು ಪಾವತಿಸಲಾಗದ ಕಾರಣ ರಾಜ್ಯ ಸರ್ಕಾರವು ಈ ಯೋಜನೆಗಳಿಗಾಗಿ ಹೊಸದಾಗಿ ವಿದೇಶಿ ಸಂಸ್ಥೆಗಳಿಂದ ಸಾಲವನ್ನು ಪಡೆಯಲಾಗದ ಸ್ಥಿತಿಯಲ್ಲಿದೆ.

ಓದಿ:ಪಾಕ್ ಉಗ್ರರಿಂದ ಸ್ಫೋಟದ ಷಡ್ಯಂತ್ರ: ಮಹಾರಾಷ್ಟ್ರ ಎಟಿಎಸ್ನಿಂದ ಮತ್ತೊಬ್ಬನ ಬಂಧನ

ಕೇಂದ್ರ ಹಣಕಾಸು ಸಚಿವಾಲಯದಡಿ ಬರುವ ಆರ್ಥಿಕ ವ್ಯವಹಾರಗಳ ಇಲಾಖೆಯು (ಡಿಇಎ), ಈ ಬೆಳವಣಿಗೆ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿವರಣೆ ನೀಡುವಂತೆ ರಾಜ್ಯದ ಹಣಕಾಸು ಇಲಾಖೆಗೆ ಸೂಚಿಸಿದೆ.

ಸರ್ಕಾರದ ಖಾತೆಯಲ್ಲಿಯೇ ದೊಡ್ಡ ಮೊತ್ತದ ಮುಂಗಡ ಹಣ ಉಳಿದುಕೊಂಡಿದೆ. ವಿವಿಧ ಇಲಾಖೆಗಳು ಅನುದಾನ ಬಳಸಿರುವ ಕ್ರಮ ತೃಪ್ತಿಕರವಾಗಿಲ್ಲ. ಸೆಪ್ಟೆಂಬರ್ 7ರಂದು ಇದ್ದಂತೆ ಮುಂಗಡವಾಗಿ ಬಿಡುಗಡೆ ಮಾಡಿರುವ ಮೊತ್ತ ಸುಮಾರು ₹ 960 ಕೋಟಿ ಆಗಿದೆ ಎಂದು ಡಿಇಒ ರಾಜ್ಯದ ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದೆ.

ಸಾಲದ ಮೊತ್ತವನ್ನು ದೊಡ್ಡ ಪ್ರಮಾಣದಲ್ಲಿ ಬಳಸಲಾಗಿಲ್ಲ. ಒಂದೆಡೆ ಬಡ್ಡಿ ಮೊತ್ತ ತೀವ್ರಗತಿಯಲ್ಲಿ ಏರುತ್ತಿದೆ, ಇನ್ನೊಂದೆಡೆ ಕಾಮಗಾರಿಗಳ ಅನುಷ್ಠಾನ ಆಮೆಗತಿಯಲ್ಲಿದೆ ಎಂದು ಡಿಇಎ ಹೇಳಿದೆ. ಅಲ್ಲದೆ, ಡಿಇಎ ಅಧಿಕಾರಿಗಳು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೂ ದೂರವಾಣಿ ಕರೆ ಮಾಡಿದ್ದು, ವಿವರಣೆ ನೀಡಲು ಸೂಚಿಸಿದ್ದಾರೆ.

ಓದಿ:ಪಂಜಾಬ್: ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದ ಅಂಬಿಕಾ ಸೋನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.