ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಲೋಕಸಭೆಗೆ ಮೊದಲು BRS, BJP, AIMIM ‘ಚೆಡ್ಡಿ ಗ್ಯಾಂಗ್‌’ ರಚನೆ: ರೇವಂತ್‌ ರೆಡ್ಡಿ

Published 26 ಅಕ್ಟೋಬರ್ 2023, 12:38 IST
Last Updated 26 ಅಕ್ಟೋಬರ್ 2023, 12:38 IST
ಅಕ್ಷರ ಗಾತ್ರ

ನವದೆಹಲಿ: ತೆಲಂಗಾಣದ ವಿಧಾನಸಭೆ ಚುನಾವಣೆಯಲ್ಲಿ ಬಿಆರ್‌ಎಸ್‌, ಎಐಎಂಐಎಂ ಮತ್ತ ಬಿಜೆಪಿ ಪ್ರತ್ಯೇಕವಾಗಿ ಚುನಾವಣೆ ಎದುರಿಸುತ್ತಿರಬಹುದು. ಆದರೆ ಲೋಕಸಭೆ ಚುನಾವಣೆಗೆ ಮೊದಲು ‘ಚೆಡ್ಡಿ ಗ್ಯಾಂಗ್‌’ ಒಗ್ಗೂಡಿ ಮೈತ್ರಿ ಮಾಡಿಕೊಳ್ಳಲಿವೆ ಎಂದು ತೆಲಂಗಾಣ ಕಾಂಗ್ರೆಸ್‌ ಅಧ್ಯಕ್ಷ ಎ. ರೇವಂತ್‌ ರೆಡ್ಡಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಆರ್‌ಎಸ್‌, ಬಿಜೆಪಿ ಮತ್ತು ಎಐಎಂಐಎಂ ಈ ಮೂರು ‘ಚೆಡ್ಡಿ ಗ್ಯಾಂಗ್‌’ ಆಗಿವೆ. ವಿಧಾನಸಭೆ ಚುನಾವಣೆ ಬಳಿಕ ಮುಂದಿನ ಜನವರಿ– ಫೆಬ್ರುವರಿಯಲ್ಲಿ ಒಗ್ಗೂಡಲಿವೆ. ‘ಕರ್ನಾಟಕದಲ್ಲಿ ನೀವು ಇದನ್ನು ನೋಡಿದ್ದೀರಿ. ಅಲ್ಲಿ ಜೆಡಿ(ಎಸ್‌) ಮತ್ತು ಬಿಜೆಪಿ ವಿಧಾನಸಭೆ ಚುನಾವಣೆ ಬಳಿಕ ಮೈತ್ರಿ ಮಾಡಿಕೊಂಡಿವೆ. ತೆಲಂಗಾಣದಲ್ಲೂ ಹೀಗೆಯೇ ಆಗಲಿದೆ’ ಎಂದರು.

ಬಿಜೆಪಿಯ ಬಿ–ಟೀಮ್‌ ಜೆಡಿ(ಎಸ್‌). ತೆಲಂಗಾಣದಲ್ಲಿ ಎಐಎಂಐಎಂ ಜತೆಗೆ ಬಿಆರ್‌ಎಸ್‌ ಕೂಡ ಬಿಜೆಪಿಯ ಬಿ–ಟೀಮ್‌ನಂತೆ ವರ್ತಿಸುತ್ತಿದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

ಅತಂತ್ರ ವಿಧಾನಸಭೆಯ ಸಂದರ್ಭದಲ್ಲಿ ಎಐಎಂಐಎಂ ಜತೆಗೆ ಮೈತ್ರಿಗೆ ಕಾಂಗ್ರೆಸ್‌ ಮುಕ್ತವಾಗಲಿದೆಯೇ ಎಂದು ಕೇಳಿದ್ದಕ್ಕೆ, 2014ರ ಬಳಿಕ ಆಂಧ್ರಪ್ರದೇಶ ಅಥವಾ ತೆಲಂಗಾಣದಲ್ಲಿ ಅತಂತ್ರ ವಿಧಾನಸಭೆ ಆಗಿಲ್ಲ ಎಂದರು.

‘ತೆಲುಗು ಭಾಷಿಕರು ಯಾವಾಗಲೂ ಭಾರಿ ಬಹುಮತವನ್ನೇ ನೀಡಿದ್ದಾರೆ. ಈ ಸಲ ನಾವು ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತೇವೆ. ಎಐಎಂಐಎಂ ಜತೆ ಮೈತ್ರಿಯ ಪ್ರಶ್ನೆಯೇ ಇರುವುದಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT