ಅಮರಾವತಿ: ತಿರುಪತಿ ಲಡ್ಡು ವಿರುದ್ಧದ ಕಲಬೆರಕೆ ಆರೋಪವನ್ನು ಬಹಿರಂಗ ಪಡಿಸಿರುವ ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಇದನ್ನು ಮುಚ್ಚಿಡುವುದು ಅಪಚಾರಕ್ಕೆ ಸಮಾನವಾಗಿದೆ ಎಂದು ಪ್ರತಿಪಾದಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ, ‘ಇಂಥ ವಿಚಾರಗಳನ್ನು ತಡೆಹಿಡಿಯುವುದು ಸಾರ್ವಜನಿಕರ ನಂಬಿಕೆಗೆ ದ್ರೋಹವಾಗುತ್ತದೆ’ ಎಂದು ಹೇಳಿದರು. ‘ಭವಿಷ್ಯದಲ್ಲಿ ಏನಾದರೂ ವ್ಯತ್ಯಾಸಗಳಾದರೆ, ಅದಕ್ಕೆ ಸರ್ಕಾರ ಹೊಣೆಯಾಗಬೇಕಾಗುತ್ತದೆ’ ಎಂದು ತಿಳಿಸಿದರು.

‘ಲಡ್ಡು ಕಲಬೆರಕೆಯಾಗಿರುವುದನ್ನು ಬಹಿರಂಗಪಡಿಸದಿದ್ದರೆ, ನಮಗೆ ಅಪಚಾರವಾಗುತ್ತದೆ. ಸರ್ಕಾರ ಇದನ್ನು ಏಕೆ ಬಹಿರಂಗಪಡಿಸಿರಲಿಲ್ಲ’ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ’ ಎಂದು ನಾಯ್ಡು ಹೇಳಿದರು.

2024ರಲ್ಲಿ ವೈ.ಎಸ್. ಜಗಮೋಹನ್ರೆಡ್ಡಿ ನೇತೃತ್ವದ ಸರ್ಕಾರವಿದ್ದಾಗ, ಚಂದ್ರಬಾಬು ನಾಯ್ಡು ಅವರು ‘ತಿರುಪತಿಯ ಲಡ್ಡು ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಚಂದ್ರಬಾಬು ನಾಯ್ಡು ಆರೋಪಿಸಿದ್ದರು.

ಇದೇ ವೇಳೆ ‘ರಾಜ್ಯದ ಎಲ್ಲ ದೇವಾಲಯಗಳನ್ನು ಶುದ್ಧೀಕರಿಸಲಾಗಿದೆ. ಯಾರ ಭಾವನೆಗಳನ್ನೂ ನೋಯಿಸುವುದಿಲ್ಲ. ಪ್ರತಿ ದೇವಾಲಯದ ಪಾವಿತ್ರ್ಯ ಉಳಿಸುವ ಜವಾಬ್ದಾರಿಯನ್ನು ಎನ್ಡಿಎ ಸರ್ಕಾರ ತೆಗೆದುಕೊಳ್ಳಲಿದೆ ಎಂದು ಈ ಮೂಲಕ ಭರವಸೆ ನೀಡುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.