ಅಮರಾವತಿ, ಆಂಧ್ರಪ್ರದೇಶ: ಕುಪ್ಪಂ ವಿಧಾನಸಭಾ ಕ್ಷೇತ್ರ ಪ್ರವೇಶಿಸಲು ಮುಂದಾದ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಅಧ್ಯಕ್ಷ ಎನ್.ಚಂದ್ರಬಾಬು ನಾಯ್ಡು ಅವರನ್ನು ಪೊಲೀಸರು ಬುಧವಾರ ತಡೆದರು.

ರಾಜ್ಯದಾದ್ಯಂತ ಸಾರ್ವಜನಿಕ ಸಭೆಗಳು ಹಾಗೂ ರ‍್ಯಾಲಿಗಳನ್ನು ನಡೆಸದಂತೆ ನಿಷೇಧ ಹೇರಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ, ಪೊಲೀಸರು ನಾಯ್ಡು ಅವರಿಗೆ ತಡೆಯೊಡ್ಡಿದ ಘಟನೆ ನಡೆದಿದೆ.

ಟಿಡಿಪಿ ನಾಯಕರಿದ್ದ ಹಲವು ವಾಹನಗಳನ್ನು ಜಪ್ತಿ ಮಾಡಿದ ಪೊಲೀಸರು, ಪಕ್ಷದ ಕಾರ್ಯಕರ್ತರನ್ನು ಚದುರಿಸಲು ಲಾಠಿ ಪ್ರಹಾರ ನಡೆಸಿದರು. ಕೆಲ ಕಾರ್ಯಕರ್ತರನ್ನು ವಶಕ್ಕೆ ಪಡೆದರು.

ಬೆಂಗಳೂರಿನಿಂದ ಮರಳಿದ ನಾಯ್ಡು ಅವರಿಗೆ ಸಾವಿರಾರು ಬೆಂಬಲಿಗರು ಸ್ವಾಗತ ಕೋರಿದರು. ಆದರೆ, ಅವರು ಕುಪ್ಪಂ ವಿಧಾನಸಭಾ ಕ್ಷೇತ್ರದ ಗಡಿಯ ಗ್ರಾಮ ಪೆದ್ದೂರು ತಲುಪುತ್ತಿದ್ದಂತೆಯೇ, ಪೊಲೀಸರು ಅವರನ್ನು ತಡೆದರು.

ಈ ವೇಳೆ, ನಾಯ್ಡು ಅವರು ಪೊಲೀಸ್ ಅಧಿಕಾರಿಯೊಂದಿಗೆ ವಾಗ್ವಾದ ನಡೆಸಿದರಲ್ಲದೇ, ತಮ್ಮ ಭೇಟಿಗೆ ಅನುಮತಿ ನಿರಾಕರಿಸಲು ಕಾರಣ ಏನು ಎಂದು ಪ್ರಶ್ನಿಸಿದರು. ಇದಕ್ಕೆ ಪೊಲೀಸ್ ಅಧಿಕಾರಿ ಉತ್ತರಿಸಲಿಲ್ಲ.

ನಂತರ ಅವರು, ಪೊಲೀಸರ ಪ್ರತಿರೋಧವನ್ನು ಧಿಕ್ಕರಿಸಿ, ಪೆದ್ದೂರು ಗ್ರಾಮದ ಬೀದಿಗಳಲ್ಲಿ ಸಂಚರಿಸಿದರಲ್ಲದೇ, ಸಾರ್ವಜನಿಕ ಸಭೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.