ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನ–3ಗೆ ಕ್ಷಣಗಣನೆ: ತಿರುಪತಿ ದೇವಸ್ಥಾನಕ್ಕೆ ಭೇಟಿ ನೀಡಿದ ಇಸ್ರೊ ವಿಜ್ಞಾನಿಗಳ ತಂಡ

Published 13 ಜುಲೈ 2023, 6:38 IST
Last Updated 13 ಜುಲೈ 2023, 6:38 IST
ಅಕ್ಷರ ಗಾತ್ರ

ತಿರುಪತಿ : ಚಂದ್ರಯಾನ –3 ಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ)ಯ ವಿಜ್ಞಾನಿಗಳ ತಂಡ ತಿರುಮಲದ ವೆಂಕಟೇಶ್ವರ ದೇವಾಲಯಕ್ಕೆ ಗುರುವಾರ ಬೆಳಿಗ್ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.

ಮೂವರು ಮಹಿಳೆಯರು ಮತ್ತು ಇಬ್ಬರು ಪುರುಷ ಅಧಿಕಾರಿಗಳಿದ್ದ ತಂಡ ತಿರುಮಲ ತಿರುಪತಿ ದೇವಾಲಯಕ್ಕೆ ಭೇಟಿ ನೀಡಿದ ವಿಡಿಯೊ ಹರಿದಾಡಿದ್ದು, ವಿಜ್ಞಾನಿಗಳ ಭೇಟಿಯ ಬಗ್ಗೆ ಟಿಟಿಡಿ ದೃಢಪಡಿಸಿದೆ.

‘ಹೌದು, ಇಸ್ರೊ ತಂಡ ತಿರುಮಲಕ್ಕೆ ಭೇಟಿ ನೀಡಿದೆ. ಆದರೆ ನಮ್ಮ ಪ್ರಚಾರ ವಿಭಾಗ ಅದನ್ನು ವರದಿ ಮಾಡಿಲ್ಲ. ಇಸ್ರೊ ಅಧಿಕಾರಿಗಳು ಸಾಮಾನ್ಯವಾಗಿ ದೇವಸ್ಥಾನಕ್ಕೆ ಭೇಟಿ ನೀಡುವುದು ಕಡಿಮೆ’ ಎಂದು ಟಿಟಿಡಿ ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. 

ನಾಳೆ (ಶುಕ್ರವಾರ) ಚಂದ್ರಯಾನ –3 ಮಧ್ಯಾಹ್ನ 2.35ಕ್ಕೆ ಉಡಾವಣೆಗೊಳ್ಳಲಿದೆ. ಲ್ಯಾಂಡರ್ ಮತ್ತು ರೋವರ್ ಅನ್ನು ಹೊತ್ತ ಬಾಹ್ಯಾಕಾಶ ನೌಕೆಯು ಆ. 23ರ ಸುಮಾರಿಗೆ ಚಂದ್ರನ ಕಕ್ಷೆಯನ್ನು ತಲುಪಲಿದೆ. ನಂತರದ15 ದಿನಗಳಲ್ಲಿ ನೌಕೆ ಚಂದ್ರನ ಮೇಲೆ ಇಳಿಯಲಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT