ಬುಧವಾರ, 27 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ದಕ್ಷಿಣ ಧ್ರುವದಲ್ಲಿ ಗಂಧಕ ಪತ್ತೆ

Published 29 ಆಗಸ್ಟ್ 2023, 19:43 IST
Last Updated 29 ಆಗಸ್ಟ್ 2023, 19:43 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲ್ಮೈನಲ್ಲಿ ಗಂಧಕ ಇರುವುದನ್ನು ಚಂದ್ರಯಾನ–3ರ ರೋವರ್‌ (ಪ್ರಜ್ಞಾನ್) ಪತ್ತೆ ಮಾಡಿದೆ.

ಅಲ್ಲದೇ, ನಿರೀಕ್ಷೆಯಂತೆ ಅಲ್ಯುಮಿನಿಯಂ(ಎಎಲ್‌), ಕ್ಯಾಲ್ಷಿಯಂ,ಕಬ್ಬಿಣ, ಕ್ರೋಮಿಯಂ, ಟೈಟೆನಿಯಂ, ಮ್ಯಾಂಗನೀಸ್‌, ಸಿಲಿಕಾನ್‌ ಮತ್ತು ಆಮ್ಲಜನಕ ಧಾತುಗಳು ಪತ್ತೆಯಾಗಿವೆ. ಜಲಜನಕ ಧಾತುವಿನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಇಸ್ರೊ ತಿಳಿಸಿದೆ.

ಪ್ರಜ್ಞಾನ್‌ನಲ್ಲಿರುವ ಲಿಬ್ಸ್‌ ಉಪಕರಣವು ಈ ಧಾತುಗಳನ್ನು ಪತ್ತೆ ಮಾಡಿದ್ದು, ಚಂದ್ರನ ದಕ್ಷಿಣ ಧ್ರುವದಲ್ಲಿ ರೋವರ್‌ ಇಳಿದು ಬುಧವಾರಕ್ಕೆ ಒಂದು ವಾರ ತುಂಬಲಿದೆ. ಇನ್ನು ಏಳು ದಿನಗಳ ಕಾಲ ಪ್ರಯೋಗ ಮುಂದುವರಿಸಲಿದೆ. ಅಂದರೆ ಸೆ. 5 ರವೇಳೆಗೆ ಚಂದ್ರನಲ್ಲಿ ಕತ್ತಲು ಆವರಿಸಲಿದೆ. ಅಲ್ಲಿ ಇನ್ನು ಬೆಳಕು ಕಾಣಲು ಮುಂದಿನ 14 ದಿನಗಳು ಕಾಯಬೇಕು. ಆ ಬಳಿಕ ಮತ್ತೆ ಲ್ಯಾಂಡರ್‌ ಮತ್ತು ರೋವರ್‌ಗಳಿಗೆ ಮರು ಜೀವ ನೀಡಲು ಸಾಧ್ಯವೇ ಎಂಬುದನ್ನು ಇಸ್ರೊ ಪ್ರಯತ್ನ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಲಿಬ್ಸ್‌ (ಲೇಸರ್‌ ಇಂಡ್ಯೂಸ್ಡ್ ಬ್ರೇಕ್‌ಡೌನ್‌ ಸ್ಪೆಕ್ಟ್ರೊಸ್ಕೋಪ್) ಉಪಕರಣವನ್ನು ಬೆಂಗಳೂರಿನ ಎಲೆಕ್ಟ್ರೊ– ಆಪ್ಟಿಕ್ಸ್ ಸಿಸ್ಟಮ್‌ ಪ್ರಯೋಗಾಲಯ ಅಭಿವೃದ್ಧಿಪಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT