ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10, 12 ನೇ ತರಗತಿಯ ಟಾಪರ್ಸ್‌ಗೆ ಹೆಲಿಕಾಪ್ಟರ್ ಪಯಣ!

89 ವಿದ್ಯಾರ್ಥಿಗಳು ಭಾಗವಹಿಸಿ ಹೆಲಿಕಾಪ್ಟರ್ ಪಯಣದ ಆನಂದವನ್ನು ಅನುಭವಿಸಿದರು.
Published 10 ಜೂನ್ 2023, 10:21 IST
Last Updated 10 ಜೂನ್ 2023, 10:21 IST
ಅಕ್ಷರ ಗಾತ್ರ

ರಾಯಪುರ್: ಛತ್ತೀಸ್‌ಗಢ ರಾಜ್ಯದ 10, 12 ನೇ ತರಗತಿಯ ಬೋರ್ಡ್ ಪರೀಕ್ಷೆಗಳಲ್ಲಿ ರ‍್ಯಾಂಕ್‌ ಬಂದವರಿಗೆ (ಟಾಪರ್ಸ್) ಅಲ್ಲಿನ ಸರ್ಕಾರ ಪ್ರೋತ್ಸಾಹ ಕ್ರಮವಾಗಿ ಶನಿವಾರ ಹೆಲಿಕಾಪ್ಟರ್ ಪ್ರಯಾಣವನ್ನು ಆಯೋಜಿಸಿತ್ತು.

ಈ ಕಾರ್ಯಕ್ರಮದಲ್ಲಿ 89 ವಿದ್ಯಾರ್ಥಿಗಳು ಭಾಗವಹಿಸಿ ಹೆಲಿಕಾಪ್ಟರ್ ಪಯಣದ ಆನಂದವನ್ನು ಅನುಭವಿಸಿದರು.

ವಾರ್ತಾ ಇಲಾಖೆಯಿಂದ ಈ ಕಾರ್ಯಕ್ರಮವನ್ನು ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಏಳು ಸೀಟ್‌ಗಳ ಹೆಲಿಕಾಪ್ಟರ್‌ನಲ್ಲಿ ವಿದ್ಯಾರ್ಥಿಗಳು ಕನಿಷ್ಠ ಅರ್ಧ ಗಂಟೆ ಪಯಣವನ್ನು ಸರದಿಯಾಗಿ ಮಾಡಿದರು. ಶಿಕ್ಷಣ ಸಚಿವ ಪ್ರೇಮಸಾಯಿ ಸಿಂಗ್ ಈ ವೇಳೆ ಹಾಜರಿದ್ದರು.

ಇದರಲ್ಲಿ 10 ವಿದ್ಯಾರ್ಥಿಗಳು ಬುಡಕಟ್ಟು ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಈ ಪ್ರಯುಕ್ತ ‘ಆತ್ಮಾನಂದ ಮಾಧವಿ ಛತ್ರ ಪ್ರೋತ್ಸಾಹ’ ಯೋಜನೆಯನ್ನು ಸಿಎಂ ಭೂಪೇಶ್ ಬಗೇಲಾ ಅವರು ಕಳೆದ ವರ್ಷ ಜಾರಿಗೆ ತಂದಿದ್ದರು. ಕಳೆದ ವರ್ಷ 125 ವಿದ್ಯಾರ್ಥಿಗಳು ಹೆಲಿಕಾಪ್ಟರ್ ಪಯಣವನ್ನು ಆನಂದಿಸಿದ್ದರು. ಛತ್ತೀಸ್‌ಗಢ ರಾಜ್ಯ ಸರ್ಕಾರವೇ ಈ ಯೋಜನೆಗೆ ಹಣಕಾಸನ್ನು ಒದಗಿಸುತ್ತಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT