ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತ್ತೀಸಗಡ: ಆಸ್ಪತ್ರೆಯಿಂದ ಮಗಳ ಶವವನ್ನು 10ಕಿಮೀ ಹೊತ್ತುಕೊಂಡು ನಡೆದ ತಂದೆ

Last Updated 26 ಮಾರ್ಚ್ 2022, 7:00 IST
ಅಕ್ಷರ ಗಾತ್ರ

ಅಂಬಿಕಾಪುರ, ಚತ್ತೀಸಗಡ: ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ತನ್ನ ಮಗಳ ಮೃತದೇಹವನ್ನು ತಂದೆಯೊಬ್ಬ ಸುಮಾರು 10 ಕಿಮೀ ವರೆಗೂ ಹೆಗಲ ಮೇಲೆ ಹೊತ್ತುಕೊಂಡೇ ಹೋಗಿರುವ ಘಟನೆ ವರದಿಯಾಗಿದೆ.

ಚತ್ತೀಸಗಡದ ಸರಗುಜಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ಅಂಬದಾಲಾ ಹಳ್ಳಿಯ ಈಶ್ವರ್ ದಾಸ್ ಎನ್ನುವ ವ್ಯಕ್ತಿಜ್ವರದಿಂದ ಬಳಲುತ್ತಿದ್ದ ತನ್ನ 7 ವರ್ಷದ ಮಗಳು ಸುರೇಖಾಳನ್ನು ಸರಗುಜಾ ಜಿಲ್ಲೆಯ ಲಖನ್‌ಪುರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿದ್ದರು.

ಆದರೆ, ಚಿಕಿತ್ಸೆ ಫಲಿಸದೇ ಸುರೇಖಾ ಕಳೆದ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದರು. ಶವ ಸಾಗಿಸುವ ವಾಹನ ಬರದಿದ್ದರಿಂದ ಈಶ್ವರ್ ದಾಸ್ ಮಗಳ ಶವವನ್ನು ಹೊತ್ತುಕೊಂಡೇ ಮನೆಗೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ಮಾಡಿದ್ದರು.

ಈಶ್ವರ್ ದಾಸ್ ಮಗಳ ಶವವನ್ನು ಹೊತ್ತುಕೊಂಡೇ ಸಾಗಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇನ್ನು ಈ ಘಟನೆ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲುಚತ್ತೀಸ್‌ಗಡದ ಆರೋಗ್ಯ ಸಚಿವ ಟಿಎಸ್ ಸಿಂಗ್ ಡಿಯೋ ಆದೇಶಿಸಿದ್ದಾರೆ.

ಇನ್ನೊಂದೆಡೆ ಶವ ಸಾಗಣೆ ವಾಹನ ಒದಗಿಸುತ್ತೇವೆ ಎಂದರೂ ನಮ್ಮ ಮಾತು ಕೇಳದೇ ವ್ಯಕ್ತಿ ಈ ರೀತಿ ಮಾಡಿದ್ದಾರೆ ಎಂದು ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳು ಹೇಳಿರುವುದಾಗಿಎನ್‌ಡಿಟಿವಿ ವರದಿ ಮಾಡಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT