ಈ ಸಂಬಂಧ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿರುವ ಅವರು, ರಷ್ಯಾ–ಉಕ್ರೇನ್ ಗಡಿಯಲ್ಲಿ ಡ್ರೋನ್ ದಾಳಿಯಲ್ಲಿ ಮೃತಪಟ್ಟ ಕೇರಳದ ತ್ರಿಶೂರ್ ಮೂಲದ ಸಂದೀಪ್ ಚಂದ್ರನ್ ಅವರ ಮೃತದೇಹವನ್ನು ಮರಳಿ ಸ್ವದೇಶಕ್ಕೆ ತರಲು ಮಧ್ಯಸ್ಥಿಕೆ ವಹಿಸುವಂತೆ ಕೋರಿದ್ದಾರೆ.
ಸಂದೀಪ್ ಮೃತದೇಹ ರಷ್ಯಾದ ರೋಸ್ಟೋವ್‌ನಲ್ಲಿದೆ ಎಂದು ರಷ್ಯಾದಲ್ಲಿರುವ ಭಾರತ ರಾಯಭಾರ ಕಚೇರಿ ತಿಳಿಸಿದೆ. ಆದ್ದರಿಂದ ಮೃತದೇಹವನ್ನು ತಾಯ್ನಾಡಿಗೆ ಸಾಧ್ಯವಾದಷ್ಟು ಬೇಗ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪಿಣರಾಯಿ ಅವರು ಒತ್ತಾಯಿಸಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಕೇರಳಿಗರಾದ ಸಂತೋಷ್ ಕಟ್ಟುಕಳಾಯಿಲ್, ಷಣ್ಮುಖನ್, ಸಿಬಿ ಸುಸಮ್ಮ ಬಾಬು ಮತ್ತು ರೆನಿನ್ ಪುನ್ನೆಕ್ಕಲ್ ಥಾಮಸ್ ಎಂಬುವವರು ಲುಹಾನ್‌ಸ್ಕ್‌ನ ಮಿಲಿಟರಿ ಶಿಬಿರದಲ್ಲಿ ಸಿಲುಕಿಕೊಂಡಿದ್ದು, ಅಪಾಯಕಾರಿ ಪರಿಸ್ಥಿತಿಗಳನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಅವರ ರಕ್ಷಣೆ ಅಗತ್ಯವಾಗಿದೆ ಎಂದು ಪಿಣರಾಯಿ ತಿಳಿಸಿದ್ದಾರೆ.