ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋವು ಕಳ್ಳಸಾಗಣೆ ಮಾಡುವವನೆಂದು ಭಾವಿಸಿ ಗುಂಡಿಕ್ಕಿ 12ನೇ ತರಗತಿ ವಿದ್ಯಾರ್ಥಿ ಕೊಲೆ

Published : 3 ಸೆಪ್ಟೆಂಬರ್ 2024, 6:45 IST
Last Updated : 3 ಸೆಪ್ಟೆಂಬರ್ 2024, 6:45 IST
ಫಾಲೋ ಮಾಡಿ
Comments

ಫರೀದಾಬಾದ್‌: ಗೋವು ಕಳ್ಳಸಾಗಣೆ ಮಾಡುವವನೆಂದು ತಪ್ಪಾಗಿ ಭಾವಿಸಿ 12ನೇ ತರಗತಿಯ ವಿದ್ಯಾರ್ಥಿಯನ್ನು ಬೆನ್ನಟ್ಟಿದ ಐವರ ತಂಡ ಆತನನ್ನು ಗುಂಡಿಕ್ಕಿ ಹತ್ಯೆ ಮಾಡಿದೆ.

ಹರಿಯಾಣದ ಫರೀದಾಬಾದ್‌ನಲ್ಲಿ ಆ.23ರಂದು ಈ ಘಟನೆ ನಡೆದಿದ್ದು, ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರ್ಯನ್ ಮಿಶ್ರಾ ಮೃತ ವಿದ್ಯಾರ್ಥಿ. ಸೌರಭ್‌, ಅನಿಲ್‌ ಕೌಶಿಕ್‌, ವರುಣ್‌, ಕೃಷ್ಣ, ಮತ್ತ ಆದೀಶ್‌ ಬಂಧಿತರು.

ವಿಚಾರಣೆ ವೇಳೆ ಆರೋಪಿಗಳು, ‘ಆಗಸ್ಟ್ 23ರ ರಾತ್ರಿ ಫರೀದಾಬಾದ್‌ ನಗರದಲ್ಲಿ ಎರಡು ಎಸ್‌ಯುವಿಗಳಲ್ಲಿ ಜಾನುವಾರು ಕಳ್ಳಸಾಗಣೆ ಮಾಡುವವರು ಸಂಚರಿಸುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಹೇಳಿದ್ದಾರೆ. 

'ಮಾಹಿತಿ ಆಧರಿಸಿ ಶೋಧ ನಡೆಸುವಾಗ ಆರ್ಯನ್‌ ಮಿಶ್ರಾ, ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್‌ ಕಾರಿನಲ್ಲಿ ಸಂಚರಿಸುತ್ತಿರುವುದನ್ನು ಕಂಡು, ಅವರನ್ನೇ ಗೋವು ಕಳ್ಳಸಾಗಣೆ ಮಾಡುವವರು ಎಂದು ತಪ್ಪಾಗಿ ಭಾವಿಸಿದ್ದಾರೆ. ಸುಮಾರು 30 ಕಿ. ಮೀ ಆರೋಪಿಗಳು ಅವರನ್ನು ಹಿಂಬಾಲಿಸಿದ್ದಾರೆ. ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಗಧಪುರಿ ಟೋಲ್ ಬಳಿ ಕಾರು ನಿಲ್ಲಿಸುವಂತೆ ಹೇಳಿದಾಗ ಆರ್ಯನ್‌ ಕಾರಿನ ವೇಗವನ್ನು ಹೆಚ್ಚಿಸಿದ್ದಾರೆ. ಆ ವೇಳೆ ಆರೋಪಿಗಳು ಗುಂಡು ಹಾರಿಸಿದ್ದು ಆರ್ಯನ್‌ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ

ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ಘಟನಾ ಸ್ಥಳದಿಂದ ಕಾರು ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT