ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಾಣೆ: ಬಟ್ಟೆ ವ್ಯಾಪಾರಿಗೆ ₹1.14 ಕೋಟಿ ವಂಚನೆ

Published 25 ಮಾರ್ಚ್ 2024, 11:59 IST
Last Updated 25 ಮಾರ್ಚ್ 2024, 11:59 IST
ಅಕ್ಷರ ಗಾತ್ರ

ಥಾಣೆ: ಭಿವಂಡಿಯ ಬಟ್ಟೆ ವ್ಯಾಪಾರಿಯೊಬ್ಬರಿಗೆ ಅಹಮದಾಬಾದ್‌ನ ಇಬ್ಬರು ವರ್ತಕರು ಒಂದು ಕೋಟಿ ರೂಪಾಯಿಗೂ ಅಧಿಕ ಹಣವನ್ನು ವಂಚಿಸಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಆರೋಪಿಗಳು ಹಾಗೂ ವ್ಯಾಪಾರಿಯ ನಡುವೆ ಉದ್ಯಮ ಸಂಬಂಧ ಇತ್ತು. ಆಗಾಗ್ಗೆ ಬಾಕಿ ಹಣವನ್ನು ಪಾವತಿಸುತ್ತಿದ್ದರು. ಆದರೆ 2023ರ ಸೆಪ್ಟೆಂಬರ್‌ನಿಂದ ಈವರೆಗೆ ₹1.14 ಕೋಟಿ ಪಾವತಿ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಎಫ್‌ಐಆರ್‌ ಉಲ್ಲೇಖಿಸಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಹಮದಾಬಾದ್‌ ಮೂಲದ ಭವೇಶ್ ಕೆಸುರ್‌ ಹಾಗೂ ಅಲ್ಪೇಶ್ ಪಟೇಲ್ ಆರೋಪಿಗಳು. ಅವರ ವಿರುದ್ಧ ದೂರು ದಾಖಲಾಗಿದ್ದು, ಇನ್ನೂ ಬಂಧನವಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT