ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಧಾಮೂರ್ತಿ ಅವರ ಹೊಸ ಕಾದಂಬರಿ Common Yet Uncommon ಬಿಡುಗಡೆಗೆ ಸಿದ್ಧ

Published 19 ಆಗಸ್ಟ್ 2023, 13:35 IST
Last Updated 19 ಆಗಸ್ಟ್ 2023, 13:35 IST
ಅಕ್ಷರ ಗಾತ್ರ

ನವದೆಹಲಿ: ಹೆಸರಾಂತ ಲೇಖಕಿ ಸುಧಾಮೂರ್ತಿ ಅವರ ನೂತನ ಆಂಗ್ಲ ಕಾದಂಬರಿ ‘ಕಾಮನ್‌ ಎಟ್ ಅನ್‌ಕಾಮನ್‌’ ಮುಂದಿನ ವಾರ ಬಿಡುಗಡೆ ಆಗಲಿದೆ ಎಂದು ಪೆಂಗ್ವಿನ್ ರ‍್ಯಾಂಡಮ್‌ ಹೌಸ್‌ ಇಂಡಿಯಾ ಪ್ರಕಾಶನ ಸಂಸ್ಥೆಯು ಪ್ರಕಟಿಸಿದೆ.

ಮಕ್ಕಳ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಸುಧಾಮೂರ್ತಿ ಅವರು ಏಳು ವರ್ಷಗಳ ತರುವಾಯ ವಯಸ್ಕ ಓದುಗರನ್ನು ಗುರಿಯಾಗಿಸಿದ ಕಾದಂಬರಿ ರಚಿಸಿದ್ದಾರೆ. ಈ ಹಿಂದೆ 2017ರಲ್ಲಿ ಅವರ ಕಾದಂಬರಿ ‘ತ್ರಿ ಥೌಸಂಡ್ ಸ್ಟಿಚ್ಚಸ್’ ಪ್ರಕಟವಾಗಿತ್ತು.

ಶನಿವಾರ 73ನೇ ವರ್ಷದ ಜನ್ಮದಿನ ಆಚರಿಸಿಕೊಂಡಿರುವ ಸುಧಾಮೂರ್ತಿ ಈವರೆಗೆ ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ಭಾಷೆಗಳಲ್ಲಿ 250ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಹುಟ್ಟೂರಿನಲ್ಲಿನ ಬೆಳವಣಿಗೆಗಳಿಂದ ಪ್ರೇರೇಪಿತವಾಗಿರುವ ಹೊಸ ಕಾದಂಬರಿ, ಸಾಮಾನ್ಯವಾದುದರಲ್ಲಿ ಅಡಗಿರುವ ಅಸಾಮಾನ್ಯ ಸಂಗತಿಗಳಿಗೆ ಒತ್ತು ನೀಡಲಿದೆ.

ಅಕ್ಟೋಬರ್‌ ತಿಂಗಳಿನಿಂದ ಕಾದಂಬರಿಯು ಲಭ್ಯವಿರಲಿದೆ. ಸದ್ಯ ಎಲ್ಲ ಪ್ರಮುಖ ಇ–ಕಾಮರ್ಸ್‌ ಜಾಲತಾಣಗಳ ಮೂಲಕ ಪ್ರತಿಗಳನ್ನು ಕಾಯ್ದಿರಿಸಬಹುದಾಗಿದೆ ಎಂದು ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT