ತಿರುವನಂತಪುರ: ಕಣ್ಣೂರು ಜಿಲ್ಲೆಯ ಅರಿಕ್ಕೋಡ್ ಕ್ಷೇತ್ರದ ಮುಸ್ಲಿಂ ಲೀಗ್ ಶಾಸಕ ಕೆ.ಎಂ. ಶಾಜಿ ಅವರನ್ನು ಕೇರಳ ಹೈಕೋರ್ಟ್ ಅನರ್ಹಗೊಳಿಸಿದೆ.

ಪ್ರಚಾರ ಸಂದರ್ಭದಲ್ಲಿ ಕೋಮು ಧ್ರುವೀಕರಣಕ್ಕೆ ಕಾರಣವಾಗುವ ಸಾಮಗ್ರಿ ಬಳಸಿದ್ದರು ಎಂಬ ಕಾರಣಕ್ಕೆ ಈ ತೀರ್ಪು ನೀಡಿದೆ.

ಈ ಕ್ಷೇತ್ರದಲ್ಲಿ ಮರು ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ತೀರ್ಪು ಜಾರಿಗೆ ಎರಡು ವಾರಗಳ ತಡೆಯನ್ನು ಕೂಡ ನೀಡಿದೆ.

ಶಾಜಿಯ ಪ್ರತಿಸ್ಪರ್ಧಿಯಾಗಿದ್ದ ಸಿಪಿಎಂನ ಎಂ.ವಿ. ನಿಕೇಶ್ ಕುಮಾರ್ ದೂರು ನೀಡಿದ್ದರು.

ಮುಸ್ಲಿಮೇತರ ಅಭ್ಯರ್ಥಿಗೆ ಮತ ಹಾಕಬಾರದು ಎಂಬ ಕರಪತ್ರಗಳನ್ನು ಶಾಜಿ ಹಂಚಿದ್ದಾರೆ ಎಂಬುದು ನಿಕೇಶ್ ಅವರ ಆರೋಪವಾಗಿತ್ತು.

ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ತಮ್ಮ ಪ್ರಚಾರ ಸಾಮಗ್ರಿಗಳಲ್ಲಿ ಈ ಕರಪತ್ರಗಳನ್ನು ಹೊರಗಿನ ಯಾರೋ ಸೇರಿಸಿದ್ದಾರೆ. ಹಾಗಾಗಿ ಸುಳ್ಳು ಆರೋಪದ ಆಧಾರದಲ್ಲಿ ತೀರ್ಪು ನೀಡಲಾಗಿದೆ. ತಮಗೆ ಜಾತ್ಯತೀತ ಮೌಲ್ಯಗಳಲ್ಲಿ ನಂಬಿಕೆ ಇದೆ. ಯಾವತ್ತೂ ಕೋಮು ರಾಜಕಾರಣ ಮಾಡಿಲ್ಲ. ಅದೂ ಅಲ್ಲದೆ, ಮುಸ್ಲಿಮರು ಶೇಕಡ 20ರಷ್ಟಿರುವ ಕ್ಷೇತ್ರದಲ್ಲಿ ಇಂತಹ ಕಾರ್ಯತಂತ್ರ ಅನುಸರಿಸುವುದು ತಾರ್ಕಿಕವೂ ಅಲ್ಲ ಎಂದು ಶಾಜಿ ಹೇಳಿದ್ದಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವವರೆಗೆ ತೀರ್ಪಿಗೆ ತಡೆ ನೀಡಬೇಕು ಎಂಬ ಶಾಜಿ ಅವರ ಮನವಿ ಆಧಾರದಲ್ಲಿ ತೀರ್ಪು ಜಾರಿಗೆ ಎರಡು ವಾರ ತಡೆ ನೀಡಲಾಗಿದೆ. ಮೇಲ್ಮನವಿ ಸಲ್ಲಿಸುವವರೆಗೆ ತಡೆ ನೀಡದಿದ್ದರೆ ಆ ಅವಧಿಯಲ್ಲಿ ಕ್ಷೇತ್ರಕ್ಕೆ ಶಾಸನಸಭೆಯಲ್ಲಿ ಪ್ರತಿನಿಧಿಯೇ ಇಲ್ಲದಂತಾಗುತ್ತದೆ ಎಂದು ಶಾಜಿ ವಾದಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.