ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗ್ನಿಪಥ ಬೆಂಬಲಿಸಿದ ಮನೀಶ್ ತಿವಾರಿ; ಅಂತರ ಕಾಯ್ದುಕೊಂಡ ಕಾಂಗ್ರೆಸ್

Last Updated 29 ಜೂನ್ 2022, 9:30 IST
ಅಕ್ಷರ ಗಾತ್ರ

ನವದೆಹಲಿ: ಸೇನಾ ನೇಮಕಾತಿಗಾಗಿ ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ ಯೋಜನೆಯನ್ನು ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಬೆಂಬಲಿಸಿದ್ದಾರೆ.

ಈ ವಿಷಯದಲ್ಲಿ ಅಂತರ ಕಾಯ್ದುಕೊಂಡಿರುವ ಕಾಂಗ್ರೆಸ್, ಇದು ಮನೀಶ್ ತಿವಾರಿ ಅವರ ವೈಯಕ್ತಿಕ ಅಭಿಪ್ರಾಯ ಎಂದು ಹೇಳಿದೆ. ಅಲ್ಲದೆ ಅಗ್ನಿಪಥ ಯೋಜನೆಯು ದೇಶ ಹಾಗೂ ಯುವ ಜನಾಂಗ ವಿರೋಧಿ ಎಂದು ಹೇಳಿದೆ.

'ಇಂಡಿಯನ್ ಎಕ್ಸ್‌ಪ್ರೆಸ್' ಲೇಖನದಲ್ಲಿ ತಿವಾರಿ, ಅಗ್ನಿಪಥ ಯೋಜನೆಗೆ ಸಂಬಂಧಿಸಿದಂತೆ ನೇಮಕಾತಿ ಸುಧಾರಣೆಗಳ ಬಗ್ಗೆ ಒಲವು ತೋರಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯಸಭೆ ಸದಸ್ಯ, ಜೈರಾಮ್ ರಮೇಶ್, ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಅಗ್ನಿಪಥ ಯೋಜನೆಯ ಕುರಿತು ಲೇಖನ ಬರೆದಿದ್ದಾರೆ. ಕಾಂಗ್ರೆಸ್ ದೇಶದ ಏಕೈಕ ಪ್ರಜಾಸತ್ತಾತ್ಮಕ ಪಕ್ಷವಾಗಿದ್ದು, ಮನೀಶ್ ಅಭಿಪ್ರಾಯ ವೈಯಕ್ತಿಕವಾಗಿದ್ದು, ಪಕ್ಷಕ್ಕೆ ಸಂಬಂಧಿಸಿದ್ದಲ್ಲಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ತಿವಾರಿ, ಲೇಖನದ ಟ್ಯಾಗ್ ಲೈನ್ ವೈಯಕ್ತಿಯ ಅಭಿಪ್ರಾಯ ಎಂದು ಹೇಳುತ್ತಿದೆ. ಜೈರಾಮ್ ರಮೇಶ್ ಅದನ್ನು ಕೊನೆಯವರೆಗೂ ಓದುತ್ತಾರೆ ಎಂದು ಬಯಸುತ್ತೇನೆ ಎಂದು ಲೇಖನದ ಸ್ಕ್ರೀನ್ ಶಾಟ್ ಲಗತ್ತಿಸಿದ್ದಾರೆ.

ಈ ಹಿಂದೆಯೂ ಸೇನಾ ನೇಮಕಾತಿ ಅಗ್ನಿಪಥ ಯೋಜನೆಯನ್ನು ತಿವಾರಿ ಬೆಂಬಲಿಸಿದ್ದರು. ದೇಶದ ಸಶಸ್ತ್ರ ಪಡೆಗಳು ಉದ್ಯೋಗ ಖಾತರಿ ಉಪಕ್ರಮವಾಗಬಾರದು. ಇದು ಹೆಚ್ಚು ಅವಶ್ಯಕವಾಗಿರುವ ಸುಧಾರಣೆಯಾಗಿದ್ದು, ಸರಿಯಾದ ದಿಶೆಯಲ್ಲಿದೆ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT