ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ‘ಕ್ಷುಲ್ಲಕ ರಾಜಕಾರಣ’ದಿಂದ ಹೊರಬರಬೇಕು. ಬಿಜೆಪಿಯು ಹೇಗೆ ‘ವಿರೋಧ ಪಕ್ಷದ ನಾಯಕನ ಜೀವವನ್ನು ಅಪಾಯದಲ್ಲಿರಿಸಿದೆ’ ಎಂಬುದನ್ನು ಇಡೀ ವಿಶ್ವವೇ ನೋಡುತ್ತಿದೆ ಎಂದು ಕಾಂಗ್ರೆಸ್ ಪಕ್ಷವು ಆಕ್ರೋಶ ಹೊರಹಾಕಿದೆ.

ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ಜೆ.ಪಿ.ನಡ್ಡಾ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ಅವರು ಪತ್ರ ಬರೆದಿದ್ದು, ರಾಹುಲ್ ಗಾಂಧಿ ಅವರಿಗಿರುವ ಜೀವ ಬೆದರಿಕೆ ಕುರಿತಂತೆ ಬಿಜೆಪಿಯ ನಡೆಯನ್ನು ಖಂಡಿಸಿದ್ದಾರೆ. ರಾಹುಲ್ ಅವರಿಗೆ ಇರುವ ಬೆದರಿಕೆಗಳ ಬಗ್ಗೆ ಗಮನ ಸೆಳೆಯಲು ಪ್ರಧಾನಿ ಅವರಿಗೆ ಪತ್ರ ಬರೆದ ಖರ್ಗೆ ಅವರಿಗೆ ನಡ್ಡಾ ಅವರು ನೀಡಿರುವ ಪ್ರತಿಕ್ರಿಯೆ ಬಾಲಿಶವಾಗಿದೆ ಎಂದೂ ಅವರು ತಿಳಿಸಿದ್ದಾರೆ.

‘ಖರ್ಗೆ ಅವರು ತಮಗೆ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಲು ಅದನ್ನು ಪ್ರಧಾನಿ ನಿಮಗೆ ವರ್ಗಾಯಿಸಿದ್ದು ನಮಗೆ ಆಶ್ಚರ್ಯ ತಂದಿದೆ. ವಿರೋಧ ಪಕ್ಷದ ನಾಯಕನ ಮೇಲಿನ ಜೀವ ಬೆದರಿಕೆ ಕುರಿತಂತೆ ಪ್ರಧಾನಿ ಮೌನವಹಿಸಿರುವುದು ಆತಂಕಕಾರಿ. ಬಾಲಿಶ ಪ್ರತಿಕ್ರಿಯೆ ಮೂಲಕ ರಾಹುಲ್ ಗಾಂಧಿಯವರ ಜೀವ ಬೆದರಿಕೆ ವಿಷಯದ ಕುರಿತ ಗಮನವನ್ನು ಬೇರೆಡೆಗೆ ಸೆಳೆಯುವ ನಿಮ್ಮ ಪ್ರಯತ್ನ ನಾಚಿಕೆಗೇಡಿನದ್ದು’ ಎಂದು ರಮೇಶ್ ಪತ್ರದಲ್ಲಿ ತಿಳಿಸಿದ್ದಾರೆ.

‘ಕಾಂಗ್ರೆಸ್ ನಾಯಕರು ರಾಷ್ಟ್ರಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ. ಮಹಾತ್ಮ ಗಾಂಧಿ ಅವರ ಹತ್ಯೆಯ ಮುನ್ನ ನಿಮ್ಮ ಸೈದ್ಧಾಂತಿಕ ಪೂರ್ವಜರು ಬಾಪು ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು’ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಪ್ರಭಾರ) ಕೆ.ಸಿ.ವೇಣುಗೋಪಾಲ್ ಅವರು, ‘ಗಂಭೀರ ವಿಷಯದ ಬಗ್ಗೆ ಪ್ರಧಾನಿ ಮೋದಿಯವರು ಸ್ವತಃ ಪ್ರತಿಕ್ರಿಯಿಸದಿರುವುದು ದುರಹಂಕಾರವನ್ನು ತೋರಿಸುತ್ತದೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.

ಪ್ರಧಾನಿ ವಿರುದ್ಧ ಕಾಂಗ್ರೆಸ್ ನಾಯಕರು ಬಳಸಿದ ಪದಗಳ ಆಯ್ಕೆ ಹಾಗೂ ಇತರ ಕಾಂಗ್ರೆಸ್ ಸದಸ್ಯರ ವಿರುದ್ಧದ ಬಿಜೆಪಿ ಕಾರ್ಯಕರ್ತರ ದೂರುಗಳನ್ನು ಖರ್ಗೆ ಅವರಿಗೆ ಬರೆದ ಪತ್ರದಲ್ಲಿ ನಡ್ಡಾ ಅವರು ಉಲ್ಲೇಖಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.