ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮಹಾರಾಷ್ಟ್ರ | ಉದ್ಧವ್‌-ರಾಜ್‌ ಠಾಕ್ರೆ ನಡುವೆ ಮೈತ್ರಿಯಾದರೆ ಸ್ವಾಗತ: ಕಾಂಗ್ರೆಸ್‌

Published : 6 ಜೂನ್ 2025, 13:47 IST
Last Updated : 6 ಜೂನ್ 2025, 13:47 IST
ಫಾಲೋ ಮಾಡಿ
0
ಮಹಾರಾಷ್ಟ್ರ | ಉದ್ಧವ್‌-ರಾಜ್‌ ಠಾಕ್ರೆ ನಡುವೆ ಮೈತ್ರಿಯಾದರೆ ಸ್ವಾಗತ: ಕಾಂಗ್ರೆಸ್‌
ಕಾಂಗ್ರೆಸ್‌

ಮುಂಬೈ: ಕೋಮುವಾದಿ ಬಿಜೆಪಿಯನ್ನು ದೂರವಿಡಲು ಹಾಗೂ ಮಹಾರಾಷ್ಟ್ರದ ಹಿತಾಸಕ್ತಿ ರಕ್ಷಣೆಗಾಗಿ ಶಿವಸೇನೆ (ಯುಬಿಟಿ) ಮತ್ತು ಎಂಎನ್‌ಎಸ್‌ ನಡುವಿನ ಮೈತ್ರಿಯನ್ನು ಸ್ವಾಗತಿಸಲಿದ್ದೇವೆ ಎಂದು ಕಾಂಗ್ರೆಸ್‌ ಹೇಳಿದೆ.

ADVERTISEMENT
ADVERTISEMENT

ಮೈತ್ರಿಗೆ ಉದ್ಧವ್‌ ಠಾಕ್ರೆ ಹಾಗೂ ರಾಜ್‌ ಠಾಕ್ರೆ ಒಲವು ತೋರಿದ್ದಾರೆ ಎಂಬ ಊಹಾಪೋಹಗಳಿಗೆ ಕಾಂಗ್ರೆಸ್‌ನ ರಾಜ್ಯ ವಕ್ತಾರ ಅತುಲ್‌ ಲೋಂಡೆ ಪ್ರತಿಕ್ರಿಯಿಸಿದ್ದಾರೆ.

ಅಧಿಕಾರದಲ್ಲಿರುವವರು ಜಾತಿ ಮತ್ತು ಕೋಮು ವಿಭಜನೆ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ಬಿಜೆಪಿ ಸರ್ಕಾರದ ವಿರುದ್ಧ ಆರೋಪ ಮಾಡಿದರು.

ಛತ್ರಪತಿ ಶಿವಾಜಿ ಮಹಾರಾಜರು, ಶಾಹು ಮಹಾರಾಜರು, ಮಹಾತ್ಮ ಫುಲೆ ಹಾಗೂ ಅಂಬೇಡ್ಕರ್‌ ಅವರ ಆಶಯ, ಸಿದ್ಧಾಂತವನ್ನು ದಿನವೂ ಹೊಸಕಿ ಹಾಕುತ್ತಿದ್ದಾರೆ. ಇದರ ರಕ್ಷಣೆಗಾಗಿ ಮೈತ್ರಿಯನ್ನು ಕಾಂಗ್ರೆಸ್‌ ಸ್ವಾಗತಿಸಲಿದೆ’ ಎಂದಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
Comments0