‘ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ನಿರ್ದಿಷ್ಟ ಮಾನದಂಡಗಳಿಲ್ಲ. ಭಾಷೆ, ಉಪಭಾಷೆಗಳ ಬೆಳವಣಿಗೆಯು ಒಂದು ನಿರಂತರ ಪ್ರಕ್ರಿಯೆಯಾಗಿದ್ದು, ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗಳಿಂದ ಪ್ರೇರಿತವಾಗಿರುತ್ತದೆ. ಹೀಗಾಗಿ ಭಾಷೆಗಳನ್ನು 8ನೇ ಪರಿಚ್ಛೇದಕ್ಕೆ ಸೇರಿಸಲು ಮಾನದಂಡಗಳನ್ನು ನಿಗದಿಪಡಿಸಲು ಸಾಧ್ಯವಾಗುವುದಿಲ್ಲ. ಈ ಹಿಂದೆ ಇದಕ್ಕಾಗಿ ಪಾಹ್ವಾ (1996) ಮತ್ತು ಸೀತಾಕಾಂತ ಮೊಹಾಪಾತ್ರ (2003) ಸಮಿತಿಗಳನ್ನು ನೇಮಿಸಲಾಗಿತ್ತಾದರೂ, ಒಂದು ನಿರ್ಣಯಕ್ಕೆ ಬರಲು ಅವುಗಳಿಂದ ಸಾಧ್ಯವಾಗಲಿಲ್ಲ’ ಎಂದರು.