ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶಕ್ಕೆ ಜಾಗತಿಕ ಬ್ರ್ಯಾಂಡಿಂಗ್‌ ಅವಕಾಶ: ಯೋಗಿ ಆದಿತ್ಯನಾಥ

Published 2 ಜನವರಿ 2024, 16:16 IST
Last Updated 2 ಜನವರಿ 2024, 16:16 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯಲ್ಲಿ ಜ. 22ರಂದು ನಡೆಯುವ ರಾಮ ಮಂದಿರ ಉದ್ಘಾಟನೆ ಸಮಾರಂಭ ಉತ್ತರಪ್ರದೇಶಕ್ಕೆ ‘ಗ್ಲೋಬಲ್‌ ಬ್ರ್ಯಾಂಡಿಂಗ್‌’ ಆಗಿ ಗುರುತಿಸಿಕೊಳ್ಳಲು ಒಳ್ಳೆಯ ಅವಕಾಶವಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಂಗಳವಾರ ಹೇಳಿದ್ದಾರೆ.

ಇಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಅವರು, ಅಯೋಧ್ಯೆಯಲ್ಲಿ ನಡೆಯುತ್ತಿರುವ ವಿವಿಧ ಯೋಜನೆಗಳನ್ನು ಪರಿಶೀಲಿಸಿದರು.

‘ಇಂದು, ಇಡೀ ಜಗತ್ತು ಅಯೋಧ್ಯೆಯತ್ತ ಕುತೂಹಲದಿಂದ ನೋಡುತ್ತಿದೆ. ಎಲ್ಲರೂ ಅಯೋಧ್ಯೆಗೆ ಬರಲು ಬಯಸುತ್ತಾರೆ. ಇದು ಉತ್ತರ ಪ್ರದೇಶಕ್ಕೆ ಜಾಗತಿಕ ಬ್ರ್ಯಾಂಡಿಂಗ್‌ ಆಗಿ ಗುರುತಿಸಿಕೊಳ್ಳಲು ಒಂದು ಅವಕಾಶ. ರಾಮ ಜನ್ಮಭೂಮಿಯಲ್ಲಿನ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭವು ಎಲ್ಲೆಡೆಯಿಂದ ಬರುವ ಭಕ್ತಾದಿಗಳು, ಪ್ರವಾಸಿಗರಿಗೆ ದೈವಿಕವಾಗಿ ಅಭೂತಪೂರ್ವ ಅನುಭವ ನೀಡುವಂತೆ ಮತ್ತು ಅವರ ಮನಸಿನಲ್ಲಿ ಅವಿಸ್ಮರಣೀಯವಾಗಿ ಉಳಿಯುವಂತೆ ಸರ್ಕಾರದ ಕಡೆಯಿಂದ ಎಲ್ಲ ಅಗತ್ಯ ವ್ಯವಸ್ಥೆಗಳನ್ನು ಮಾಡಬೇಕು‘ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ರಾಮ ಮಂದಿರವು ‘ರಾಷ್ಟ್ರ ಮಂದಿರ’ ರೂಪದಲ್ಲಿ ಭಾರತದ ಸಾಂಸ್ಕೃತಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಏಕತೆಯ ಸಂಕೇತವಾಗಲಿದೆ ಎಂದು ಆದಿತ್ಯನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT