ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಳ್ಳು ಸುದ್ದಿ ನಿರ್ಣಯ: ಸಮಾಲೋಚನೆ ನಡೆದಿದೆ ಎಂದ ಕೇಂದ್ರ ಸಚಿವ ಕಿರಣ್‌ ರಿಜಿಜು

Last Updated 9 ಏಪ್ರಿಲ್ 2023, 11:32 IST
ಅಕ್ಷರ ಗಾತ್ರ

ಬುಡ್ಗಾಮ್ (ಜಮ್ಮು–ಕಾಶ್ಮೀರ): ಸುಳ್ಳು ಸುದ್ದಿಗಳು, ತಪ್ಪು ಸುದ್ದಿಗಳು ಯಾವುವು ಎಂದು ನಿರ್ಧರಿಸುವುದಕ್ಕೆ ಸಂಬಂಧಿಸಿದ ನಿಯಮಗಳಿಗೆ ತಿದ್ದುಪಡಿ ತರುವ ಕುರಿತು ಸಮಾಲೋಚನೆ ನಡೆಯುತ್ತಿದೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಭಾನುವಾರ ಹೇಳಿದರು.

ಇಲ್ಲಿ ಕಾನೂನು ನೆರವು ಘಟಕ ಕಚೇರಿಯ ಉದ್ಘಾಟನೆ ನೆರವೇರಿಸಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘ಚುನಾವಣಾ ಪ್ರಕ್ರಿಯೆಗೆ ಕೆಲವು ತಿದ್ದುಪಡಿಗಳನ್ನು ತರಲು ಉದ್ದೇಶಿಸಲಾಗಿದೆ. ಆದರೆ, ಇದು ಇನ್ನು ಸಮಾಲೋಚನೆ ಹಂತದಲ್ಲಿ ಇರುವ ಕಾರಣ, ತಿದ್ದುಪಡಿಗಳು ಹೀಗೆಯೇ ಇರುತ್ತವೆ ಎಂಬುದಾಗಿ ನಾನು ಹೇಳಲು ಸಿದ್ಧನಿಲ್ಲ’ ಎಂದರು.

‘ಸುದ್ದಿಗಳಲ್ಲಿ ಯಾವುದು ಸುಳ್ಳು ಅಥವಾ ತಪ್ಪು ಸುದ್ದಿಗಳು, ಯಾವ ಸುದ್ದಿಗಳನ್ನು ತಪ್ಪಾಗಿ ವರದಿ ಮಾಡಲಾಗಿದೆ ಎಂಬುದನ್ನು ವ್ಯಾಖ್ಯಾನಿಸುವುದು ಮಹತ್ವದ್ದು. ಹೀಗಾಗಿ, ಈ ಪ್ರಕ್ರಿಯೆಗಳು ಪೂರ್ಣಗೊಳ್ಳಲು ಸಾಕಷ್ಟು ಸಮಾಲೋಚನೆ ಅಗತ್ಯ’ ಎಂದು ರಿಜಿಜು ಹೇಳಿದರು.

ಮಾಹಿತಿ ತಂತ್ರಜ್ಞಾನ ನಿಯಮಗಳಿಗೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ತಿದ್ದುಪಡಿ ತಂದಿದ್ದು, ಏಪ್ರಿಲ್ 6ರಂದು ಅಧಿಸೂಚನೆ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT