ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ, ಸೀತೆ ಬಗ್ಗೆ ಅವಹೇಳನ; ಸಿಪಿಐ ಶಾಸಕ ಕ್ಷಮೆಯಾಚನೆ

Published 25 ಜನವರಿ 2024, 16:35 IST
Last Updated 25 ಜನವರಿ 2024, 16:35 IST
ಅಕ್ಷರ ಗಾತ್ರ

ತ್ರಿಶ್ಶೂರ್‌: ರಾಮಾಯಣ ಆಧಾರಿತ ಕಥೆಯೊಂದನ್ನು ಸಾಮಾಜಿಕ ಜಾಲತಾಣ ‘ಫೇಸ್‌ಬುಕ್‌’ನಲ್ಲಿ ಪೋಸ್ಟ್‌ ಮಾಡಿದ ಕೇರಳದ ಸಿಪಿಐ ಶಾಸಕ ಪಿ. ಬಾಲಚಂದ್ರನ್‌ ಅವರು ವಿವಾದಕ್ಕೆ ಗುರಿಯಾಗಿದ್ದಾರೆ. ಈ ಕಥೆಯು ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡಿದೆ ಎಂಬ ಆಕ್ಷೇಪ ಕೇಳಿ ಬಂದ ಬಳಿಕ ಪೋಸ್ಟ್‌ ಅನ್ನು ಅಳಿಸಿದ್ದಾರೆ.

ಶ್ರೀರಾಮ, ಸೀತೆ ಮತ್ತು ಲಕ್ಷ್ಮಣರ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳಿರುವ ಈ ಕಥೆಯನ್ನು ಅವರು ಬುಧವಾರ ಪೋಸ್ಟ್‌ ಮಾಡಿದ್ದರು. ‘ಸೀತೆಯು, ರಾಮ ಮತ್ತು ಲಕ್ಷ್ಮಣರಿಗೆ ಪರೋಟ ಹಾಗೂ ಮಾಂಸವನ್ನು ಬಡಿಸುತ್ತಿದ್ದಳು’ ಎಂಬ ಅಂಶವು ಆ ಕಥೆಯಲ್ಲಿದೆ.

‘ಹಳೆಯ ಕಥೆಯೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದೆ. ಇದರಿಂದಾಗಿ ರಾಮ ಭಕ್ತರಿಗೆ ನೋವುಂಟಾದ ಕುರಿತು ವಿಷಾದಿಸುತ್ತೇನೆ. ಈ ಕುರಿತು ಪ್ರಾಮಾಣಿಕವಾಗಿ ಕ್ಷಮೆ ಯಾಚಿಸುತ್ತೇನೆ’ ಎಂದು ಅವರು ಫೇಸ್‌ಬುಕ್‌ನಲ್ಲಿ ಮತ್ತೊಂದು ಪೋಸ್ಟ್‌ ಬರೆದಿದ್ದಾರೆ.

ಬಿಜೆಪಿ ಕಿಡಿ: ಕೋಟ್ಯಂತರ ಹಿಂದೂಗಳ ಭಾವನೆಗೆ ನೋವುಂಟು ಮಾಡಲು ಕಮ್ಯುನಿಸ್ಟರಿಗೆ ಮಾತ್ರ ಸಾಧ್ಯ. ಬಾಲಚಂದ್ರನ್ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಜೆಪಿ ಹೇಳಿದೆ.

ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಕ್ಕೆ ಮತ್ತು ಕೋಮು ಆಧಾರದಲ್ಲಿ ಸಮಾಜವನ್ನು ವಿಭಜಿಸಲು ಯತ್ನಿಸಿದ್ದಕ್ಕೆ ಬಾಲಚಂದ್ರನ್‌ ವಿರುದ್ಧ ಪ್ರಕರಣ ದಾಖಲಿಸಬೇಕು. ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT