ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿಗೆ ಗೌರವ ಸೂಚಿಸುವ ನಿರ್ಣಯಕ್ಕೆ ವಿರೋಧ: ನ್ಯಾಯಾಂಗ ಬಂಧನಕ್ಕೆ ಕಾರ್ಪೊರೇಟರ್

Last Updated 23 ಆಗಸ್ಟ್ 2018, 3:03 IST
ಅಕ್ಷರ ಗಾತ್ರ

ಔರಂಗಾಬಾದ್‌: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಯಪೇಯಿ ಅವರಿಗೆ ಗೌರವ ಸೂಚಿಸುವ ನಿರ್ಣಯವನ್ನು ವಿರೋಧಿಸಿದ್ದ ಔರಂಗಾಬಾದ್‌ ಪುರಸಭೆಯ ಸದಸ್ಯಸಯ್ಯದ್‌ ಮತೀನ್‌ ರಷೀದ್‌ ಅವರನ್ನು ಒಂದು ವರ್ಷಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪಾಯಕಾರಿ ಚಟುವಟಿಕೆಗಳ ತಡೆಗಟ್ಟುವಿಕೆ,ಅಕ್ರಮ ಮದ್ಯನಿಗ್ರಹಿಸುವ ಮಹಾರಾಷ್ಟ್ರ ಕಾಯಿದೆ 1981(ಎಂಪಿಡಿಎ)ರ ಪ್ರಕಾರಆಲ್‌–ಇಂಡಿಯಾ ಮಜೀಸ್‌–ಇ ಮುಸ್ಲೀಮಿನ್‌(ಎಐಎಮ್‌ಐಎಮ್‌) ಪಕ್ಷದ ಕಾರ್ಪೊರೇಟರ್‌ ಸಯ್ಯದ್‌ ವಿರುದ್ಧ ಔರಂಗಾಬಾದ್‌ ಸಿಟಿ ಚೌಕ್‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ.

ಆಗಸ್ಟ್‌ 16 ರಂದು ನಿಧನರಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಪುರಸಭೆಯಲ್ಲಿ ಗೌರವ ಸಲ್ಲಿಸಲು ಕಳೆದ ವಾರ ನಿರ್ಧರಿಸಲಾಗಿತ್ತು. ಇದನ್ನು ವಿರೋಧಿಸಿದ್ದಸಯ್ಯದ್‌ಮೇಲೆ ಬಿಜೆಪಿಯ ಕೆಲವು ಕಾರ್ಪೊರೇಟರ್‌ಗಳು ಹಲ್ಲೆ ನಡೆಸಿದ‌್ದರು. ಜೊತೆಗೆ ಪುರಸಭೆಯಲ್ಲಿರುವಎರಡು ಧರ್ಮದ ಸದಸ್ಯರ ನಡುವೆ ದ್ವೇಷ ಹರಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರು ನೀಡಿದ್ದರು.

ಈ ಪ್ರಕರಣಕ್ಕೆ ಸಂಬಂದಿಸಿದಂತೆ ಸಯ್ಯದ್‌ ಅವರು ಜಾಮೀನು ಪಡೆದು ಹರ್ಷಲ್‌ ಜೈಲಿನಿಂದ ಮಂಗಳವಾರ ಬಿಡುಗಡೆ ಹೊಂದುತ್ತಿದ್ದಂತೆ ಸ್ಥಳಕ್ಕೆ ಬಂದ ಸಿಟಿ ಚೌಕ್‌ ಪೊಲೀಸ್‌ ಠಾಣೆಯ ತಂಡಎಂಪಿಡಿಎ ಅಡಿಯಲ್ಲಿಮತ್ತೆ ಬಂಧಿಸಿದೆ.

ಸದ್ಯ ಅವರನ್ನು ಹರ್ಷಲ್‌ ಜೈಲಿನಲ್ಲಿ ಒಂದು ವರ್ಷ ಕಾಲ ನ್ಯಾಯಾಂಗಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣವನ್ನು ಖಚಿತ ಪಡಿಸಿರುವ ಔರಂಗಾಬಾದ್‌ ಕಮಿಷನರ್‌ ಚಿರಂಜೀವ್‌ ಪ್ರಸಾದ್‌ ಅವರು, ‘ಗಲಭೆ, ಕೋಮು ಹಿಂಸೆಗೆ ಪ್ರಚೋದನೆ, ಭಯದ ವಾತಾವರಣ ಸೃಷ್ಟಿಸುವವರ ವಿರುದ್ಧಎಂಪಿಡಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತದೆ. ಅದರಂತೆ ಮುಂಜಾಗ್ರತೆಯಾಗಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಪುರಸಭೆಯಲ್ಲಿ ರಾಷ್ಟ್ರಗೀತೆ ಹಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಯ್ಯದ್‌ ಈ ಹಿಂದೆಯೂ ವಿರೋಧ ವ್ಯಕ್ತಪಡಿಸಿದ್ದರು.

ಸಯ್ಯದ್‌ ಬಂಧನವನ್ನು ವಿರೋಧಿಸಿರುವಎಐಎಮ್‌ಐಎಮ್‌ ಪಕ್ಷದ ಶಾಸಕ ಸಯ್ಯದ್‌ ಇಮ್ತಾಜ್‌ ಜಲೀಲ್‌,‘ಸಯ್ಯದ್‌ ಅವರನ್ನು ರಾಜಕೀಯ ಕಾರಣದಿಂದ ಬಂಧಿಸಲಾಗಿದೆ. ವಾಜಪೇಯಿ ನಿಧನಕ್ಕೆ ನಮ್ಮ ಪಕ್ಷವೂ ಸಂತಾಪ ಸೂಚಿಸಿದೆ. ಈ ಬಗ್ಗೆ ಪ್ರಕಟಣೆಯನ್ನೂ ಹೊರಡಿಸಿದ್ದೇವೆ. ಮಾಜಿ ಪ್ರಧಾನಿಗೆ ಗೌರವ ಸಲ್ಲಿಸುವ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವ ಕುರಿತು ರಷೀದ್‌ ಪ್ರಸ್ತಾಪಿಸಿರಲಿಲ್ಲ. ಅವರ ಮೇಲೆ ಬಿಜೆಪಿ ಸದಸ್ಯರು ಹಲ್ಲೆ ನಡೆಸಿದ್ದಾರೆ. ನಮ್ಮ ಬಳಿ ಸಿಸಿಟಿವಿ ದೃಶ್ಯಾವಳಿಗಳಿವೆ’ ಎಂದುಗುಡುಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT