ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆ ಪ್ರಕರಣ| ಸುಶೀಲ್‌ ಕುಮಾರ್‌ಗೆ ಸಿಗದ ಜಾಮೀನು: ಜೈಲು ವಾಸ ಮುಂದುವರಿಕೆ

Last Updated 5 ಅಕ್ಟೋಬರ್ 2021, 13:19 IST
ಅಕ್ಷರ ಗಾತ್ರ

ನವದೆಹಲಿ: ಕೊಲೆ ಆರೋಪ ಎದುರಿಸುತ್ತಿರುವ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್‌ಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ನಿರಾಕರಿಸಿದೆ.

ಸುದೀರ್ಘ ವಾದ–ಪ್ರತಿವಾದಗಳನ್ನು ಆಲಿಸಿರುವ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶಿವಾಜಿ ಆನಂದ್ ಅವರು ಸುಶೀಲ್‌ ಕುಮಾರ್‌ ಅವರಿಗೆ ಬಿಡುಗಡೆ ನೀಡಲು ನಿರಾಕರಿಸಿದರು.

‘ನನ್ನ ವಿರುದ್ಧ ಸುಳ್ಳು ಪ್ರಕರಣವನ್ನು ಹಾಕಲಾಗಿದೆ. ನನ್ನನ್ನು ಅಪರಾಧಿ ಎಂದು ಬಿಂಬಿಸಲಾಗುತ್ತಿದೆ,‘ ಎಂದು ವಾದಿಸಿದ್ದ ಸುಶೀಲ್‌ ಕುಮಾರ್‌ ಜಾಮೀನು ಕೋರಿದ್ದರು.

ರಾಷ್ಟ್ರ ರಾಜಧಾನಿ ಛತ್ರಸಾಲ್‌ ಕ್ರೀಡಾಂಗಣದಲ್ಲಿ ಮೇ ನಾಲ್ಕರಂದು ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಮತ್ತು ಅವರ ಗೆಳೆಯರಾದ ಸೋನು ಮತ್ತು ಅಮಿತ್ ಕುಮಾರ್‌ ಮೇಲೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಇದರಲ್ಲಿ ಸುಶೀಲ್‌ ಮತ್ತುಅವರ ಸಹಚರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಾಗರ್‌ ನಂತರ ಮೃತಪಟ್ಟಿದ್ದರು. ಮೊಂಡಾದ ವಸ್ತುವಿನಿಂದ ಬಿದ್ದ ಪೆಟ್ಟಿನಿಂದ ಮೆದುಳಿಗೆ ಹಾನಿಯುಂಟಾಗಿ ಸಾಗರ್‌ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ಹೇಳಲಾಗಿತ್ತು.

38 ವರ್ಷದ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರನ್ನು ಮೇ 23 ರಂದು ಬಂಧಿಸಲಾಗಿತ್ತು. ಜೂನ್ 2ರಂದು ಅವರನ್ನು ಜೈಲಿಗೆ ರವಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT