ನವದೆಹಲಿ: ದೇಶದಾದ್ಯಂತ ಕಳೆದ 24 ಗಂಟೆಗಳ ಅವಧಿಯಲ್ಲಿ 22,272 ಕೊರೊನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ 251 ಜನರು ಮೃತಪಟ್ಟಿದ್ದು, 22,274 ಸೋಂಕಿತರು ಚೇತರಿಸಿಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಇದರೊಂದಿಗೆ, ದೇಶದಲ್ಲಿ ಈವರೆಗೆ ಸೋಂಕಿತರಾದವರ ಸಂಖ್ಯೆ 1.01 ಕೋಟಿ (1,01,69,118) ಮೀರಿದ್ದು, 1,47,343 ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು 97.40 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,81,667 ಸಕ್ರಿಯ ಪ್ರಕರಣಗಳಿವೆ.

ಡಿಸೆಂಬರ್ 25ರ ವೇಳೆಗೆ 16.71 (16,71,59,289) ಕೋಟಿ ಜನರ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ನಿನ್ನೆ (ಶುಕ್ರವಾರ) 8,53,527 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ.

ಜಾರ್ಖಂಡ್‌ನಲ್ಲಿ 168 ಹೊಸ ಪ್ರಕರಣ

ಡಾರ್ಖಂಡ್‌ನಲ್ಲಿ ಕಳೆದ 24 ಗಂಟೆಗಳಲ್ಲಿ (ಡಿ.25) 168 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 176 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 1,13,954ಕ್ಕೆ ಏರಿಕೆಯಾಗಿದ್ದು, ಈವರೆಗೂ 1,11,351 ಜನರು ಗುಣಮುಖರಾಗಿದ್ದಾರೆ. ಈ ಪೈಕಿ 1,016 ಜನರು ಮೃತಪಟ್ಟಿದ್ದು, 1,587 ಸಕ್ರಿಯ ಪ್ರಕರಣಗಳಿವೆ.

ಪಶ್ಚಿಮ ಬಂಗಾಳದಲ್ಲಿ 9,536 ಹೊಸ ಪ್ರಕರಣ

ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ 1,541 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 31 ಜನರು ಸಾವಿಗೀಡಾಗಿದ್ದಾರೆ. 1,954 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,44,755ಕ್ಕೆ ಏರಿಕೆಯಾಗಿದ್ದು, 9,536 ಜನರು ಮೃತಪಟ್ಟಿದ್ದಾರೆ.

ಮಹಾರಾಷ್ಟ್ರದಲ್ಲಿ 19,13,382, ಕರ್ನಾಟಕದಲ್ಲಿ 9,14,488, ಆಂಧ್ರಪ್ರದೇಶದಲ್ಲಿ 8,80,430, ತಮಿಳುನಾಡಿನಲ್ಲಿ 8,12,142, ಕೇರಳದಲ್ಲಿ 7,32,084 ಮತ್ತು ದೆಹಲಿಯಲ್ಲಿ 6,21,439 ಜನರಿಗೆ ಈವರೆಗೆ ಸೋಂಕು ತಗುಲಿದೆ.

ಇನ್ನುಳಿದಂತೆ ಕೇರಳದಲ್ಲಿ 64,203 ಮತ್ತು ಮಹಾರಾಷ್ಟ್ರದಲ್ಲಿ 57,955 ಸಕ್ರಿಯ ಪ್ರಕರಣಗಳಿದ್ದು, ದೇಶದಲ್ಲಿ ಅತಿಹೆಚ್ಚಿನ ಸಕ್ರಿಯ ಪ್ರಕರಣಗಿರುವ ರಾಜ್ಯಗಳಾಗಿ ಹೊರಹೊಮ್ಮಿವೆ. ಮೂರನೇ ಸ್ಥಾನದಲ್ಲಿ 16,159 ಸಕ್ರಿಯ ಪ್ರಕರಣಗಳೊಂದಿಗೆ ಉತ್ತರ ಪ್ರದೇಶವಿದ್ದು, 14,759 ಸಕ್ರಿಯ ಪ್ರಕರಣಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿ ಛತ್ತೀಸಗಡವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.