ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 India Update: ಸತತ 13ನೇ ದಿನ 300ಕ್ಕಿಂತ ಕಡಿಮೆ ಸಾವಿನ ಪ್ರಕರಣ

Last Updated 7 ಜನವರಿ 2021, 6:05 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್–19ನಿಂದ ಮೃತಪಡುತ್ತಿರುವವರ ಸಂಖ್ಯೆಯು ಸತತ 13ನೇ ದಿನವೂ 300ಕ್ಕಿಂತ ಕಡಿಮೆ ದಾಖಲಾಗಿದೆ. ಆದಾಗ್ಯೂ ಕೋವಿಡ್–19ನಿಂದ ಮೃತಪಟ್ಟವರ ಸಂಖ್ಯೆಯು 1.5 ಲಕ್ಷಕ್ಕಿಂತ ಹೆಚ್ಚಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಬುಧವಾರ ಒಟ್ಟು 222 ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಒಟ್ಟು ಸಾವಿನ ಸಂಖ್ಯೆ 1,50,390ಕ್ಕೆ ತಲುಪಿದೆ. ಕೊರೊನಾವೈರಸ್‌ ಸೋಂಕಿನಿಂದಾಗಿ 2020 ಮಾರ್ಚ್‌ 12ರಂದು ಮೊದಲ ಸಾವು ಸಂಭವಿಸಿತ್ತು.

1 ಕೋಟಿ ಸೋಂಕಿತರು ಗುಣಮುಖ
ದೇಶದಾದ್ಯಂತ ಹೊಸದಾಗಿ ಒಟ್ಟು 20,346 ಪ್ರಕರಣಗಳು ವರದಿಯಾಗಿವೆ. ಇದೇ ವೇಳೆ 19,587 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 1,03,95,278ಕ್ಕೆ ಏರಿಕೆಯಾಗಿದೆ. ಗುಣಮುಖರ ಸಂಖ್ಯೆ 1 ಕೋಟಿಗಿಂತ (1,00,16,859) ಹೆಚ್ಚಾಗಿದೆ. ಇನ್ನೂ 2,28,083 ಸಕ್ರಿಯ ಪ್ರಕರಣಗಳಿವೆ.

ಹೆಚ್ಚು ಸಕ್ರಿಯ ಪ್ರಕರಣಗಳಿರುವ ರಾಜ್ಯಗಳ ಸಾಲಿನಲ್ಲಿ ಕೇರಳ ಮತ್ತು ಮಹರಾಷ್ಟ್ರ ಮೊದಲೆರಡು ಸ್ಥಾನಗಳಲ್ಲಿವೆ. ಕೇರಳದಲ್ಲಿ 65,252, ಮಹಾರಾಷ್ಟ್ರದಲ್ಲಿ 51,969 ಸಕ್ರಿಯ ಪ್ರಕರಣಗಳಿವೆ.ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿ ಉತ್ತರ ಪ್ರದೇಶ (11,939) ಮತ್ತು ಕರ್ನಾಟಕ (9,196) ರಾಜ್ಯಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT