ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋವಿಡ್‌ JN.1: ದೇಶದಲ್ಲಿ 162; ಕರ್ನಾಟಕದಲ್ಲಿ 8 ಪ್ರಕರಣಗಳು ಪತ್ತೆ

Published 29 ಡಿಸೆಂಬರ್ 2023, 13:57 IST
Last Updated 29 ಡಿಸೆಂಬರ್ 2023, 14:07 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಕೋವಿಡ್‌–19ನ ಹೊಸ ರೂಪಾಂತರಿ ಜೆಎನ್‌.1 ಸೋಂಕಿತ 162 ಪ್ರಕರಣಗಳು ಪತ್ತೆಯಾಗಿವೆ.

ಕೇರಳದಲ್ಲಿ ಗರಿಷ್ಠ 83, ಗುಜರಾತ್‌ನಲ್ಲಿ 34 ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಕೆಲ ರಾಜ್ಯಗಳಲ್ಲಿ ರೂಪಾಂತರಿ JN.1 ಸೋಂಕು ಏರುಮುಖವಾಗಿದೆ. ಒಂಬತ್ತು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲೂ ರೂಪಾಂತರಿ ತಳಿ ಪತ್ತೆಯಾಗಿದೆ. 

ಗೋವಾದಲ್ಲಿ 18, ಕರ್ನಾಟಕದಲ್ಲಿ 8, ಮಹಾರಾಷ್ಟ್ರ–7, ರಾಜಸ್ಥಾನ–5, ತಮಿಳುನಾಡು–4, ತೆಲಂಗಾಣ–2 ಮತ್ತು ದೆಹಲಿಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ. 

ವಿಶ್ವ ಆರೋಗ್ಯ ಸಂಸ್ಥೆಯು JN.1 ರೂಪಾಂತರಿಯನ್ನು ಪ್ರತ್ಯೇಕ ತಳಿ ಎಂದೇ ಕರೆದಿದೆ. ವೇಗವಾಗಿ ಹರಡುವ ಇದು, ಆರೋಗ್ಯದ ಮೇಲೆ ಹೆಚ್ಚಿನ ತೊಂದರೆ ಉಂಟು ಮಾಡದು ಎಂದಿದೆ.

ಹೊಸ ಕೋವಿಡ್‌ ರೂಪಾಂತರಿ JN.1 ಲಕ್ಷಣಗಳನ್ನು ಈ ರೀತಿ ಗುರುತಿಸಲಾಗಿದೆ

  • ಕೋವಿಡ್‌ ಹೊಸ ರೂಪಾಂತರಿ ಲಕ್ಷಣಗಳು ಸೌಮ್ಯ ಮತ್ತು ಮಧ್ಯಮ ಹಂತದಲ್ಲಿರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ

  • ಜ್ವರ, ನೆಗಡಿ, ಗಂಟಲು ನೋವು, ತಲೆನೋವು ಕಾಣಿಸಿಕೊಳ್ಳುತ್ತದೆ

  • ಹೆಚ್ಚಿನ ರೋಗಿಗಳು ಉಸಿರಾಟದಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳನ್ನು ಅನುಭವಿಸಬಹುದು, ಅದು ಸಾಮಾನ್ಯವಾಗಿ ನಾಲ್ಕರಿಂದ ಐದು ದಿನಗಳಲ್ಲಿ ಸುಧಾರಿಸುತ್ತದೆ.

  • ಹೊಸ ರೂಪಾಂತರಿ ವೈರಸ್‌ ಇದ್ದರೆ ಹಸಿವು ಆಗದಿರುವುದು ಮತ್ತು ವಾಕರಿಕೆಯ ಲಕ್ಷಣಗಳಿರುತ್ತವೆ.

  • ಅತಿಯಾದ ಸುಸ್ತು, ಸ್ನಾಯುಗಳಲ್ಲಿ ಬಳಲಿಕೆ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ಗ್ಯಾಸ್ಟ್ರಿಕ್‌ ಮತ್ತು ಅಜೀರ್ಣದ ಸಮಸ್ಯೆ ಉಂಟಾಗಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT