ಡಾರ್ಜಿಲಿಂಗ್: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರವನ್ನು ವಿಭಜಿಸಿದ ಬಳಿಕ ಡಾರ್ಜಿಲಿಂಗ್ ಅನ್ನೂ ವಿಧಾನಸಭೆ ಸಹಿತ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ಬೇಡಿಕೆ ವ್ಯಕ್ತವಾಗಿದೆ.

ಶಾಶ್ವತ ರಾಜಕೀಯ ಪರಿಹಾರ ದೊರೆಕಿಸುವ ಬಿಜೆಪಿ ಭರವಸೆಯು2024ರ ವೇಳೆಗೆ ಈಡೇರುವ ವಿಶ್ವಾಸವಿದೆ ಎಂದು ಡಾರ್ಜಿಲಿಂಗ್ನ ಬಿಜೆಪಿ ಸಂಸದ ರಾಜು ಬಿಸ್ತಾ ಅಭಿಪ್ರಾಯಪಟ್ಟಿದ್ದಾರೆ. ಆದರೆ ಪಶ್ಚಿಮ ಬಂಗಾಳ ರಾಜ್ಯವನ್ನು ವಿಭಜಿಸುವ ಕೇಂದ್ರ ಸರ್ಕಾರದ ಯಾವುದೇ ಯತ್ನವನ್ನು ವಿರೋಧಿಸುವುದಾಗಿ ತೃಣಮೂಲ ಕಾಂಗ್ರೆಸ್ ಹೇಳಿದೆ.

ಗೋರ್ಖಾಲ್ಯಾಂಡ್ ಪ್ರತ್ಯೇಕ ರಾಜ್ಯ ಮಾಡುವ ಬೇಡಿಕೆ ಹಲವು ವರ್ಷಗಳಿಂದ ಇದ್ದು, ಬಿಜೆಪಿ ತನ್ನ ಭರವಸೆಯಂತೆ ಪ್ರತ್ಯೇಕ ರಾಜ್ಯ ರಚಿಸಬೇಕು ಎಂದು ಗೋರ್ಖಾ ಜನಶಕ್ತಿ ಮೋರ್ಚಾ (ಜಿಜೆಎಂ) ಆಗ್ರಹಿಸಿದೆ. ಪ್ರತ್ಯೇಕ ಕೇಂದ್ರಾಡಳಿವಾಗಿ ಘೋಷಿಸಲು ಇದು ಸರಿಯಾದ ಸಮಯವಾಗಿದ್ದು, ಸದ್ಯದಲ್ಲೇ ಪ್ರತಿಭಟನೆ ಆರಂಭಿಸುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ರೋಷನ್ ಗಿರಿ ಹೇಳಿದ್ದಾರೆ.

ಡಾರ್ಜಿಲಿಂಗ್ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶಕ್ಕೆ ಗೋರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್ ಕೂಡಾ ಒತ್ತಾಯಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಲು ಬಿಜೆಪಿ ಮುಖಂಡರು ನಿರಾಕರಿಸಿದ್ದರೂ, ಕೇಂದ್ರ ಸರ್ಕಾ ಶಾಶ್ವತ ಪರಿಹಾರ ಸೂಚಿಸಲಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.