ನವದೆಹಲಿ: ‘ಹಿಂದೂ ಧಾರ್ಮಿಕ ಗ್ರಂಥಗಳಲ್ಲಿ ಉಲ್ಲೇಖಿಸಿರುವ ‘ಧರ್ಮ’ದಂತಹ ತಾಂತ್ರಿಕ ಪದಗಳ ಬಗ್ಗೆ ವ್ಯಾಪಕ ಸಂಶೋಧನೆ ನಡೆಯಬೇಕಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಗುರುವಾರ ಹೇಳಿದರು.

ಬಿಜೆಪಿಯ ಮಾಜಿ ಸಂಸದ ತರುಣ್ ವಿಜಯ್ ರಚನೆಯ ‘ಮಂತ್ರ ವಿಪ್ಲವ’ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂತಹ ತಾಂತ್ರಿಕ ಪದಗಳ ನೈಜ ಅರ್ಥಗಳನ್ನು ಜನರು ತಿಳಿದುಕೊಳ್ಳಲು ಅನುವು ಮಾಡಿಕೊಡುವ ಗ್ರಂಥಗಳನ್ನು ಪ್ರಕಟಿಸುವ ಅಗತ್ಯವಿದೆ. ‘ಮಂತ್ರ ವಿಪ್ಲವ’ ಪದದ ಅರ್ಥ ‘ಸಂಭ್ರಮ (ಸೈದ್ಧಾಂತಿಕ ಗೊಂದಲ)’ ಎಂದು ತಿಳಿಸಿದರು.

‘ಒಂದು ನಿರ್ದಿಷ್ಟ ಕಾರ್ಯಸೂಚಿಯಡಿ ‘ಮಂತ್ರ ವಿಪ್ಲವ’ವನ್ನು ಸೃಷ್ಟಿಸಲು, ಜನರ ಮನಸ್ಸಿನಲ್ಲಿ ಪದಗಳಿಗೆ ವಿರೂಪಗೊಂಡ ಅರ್ಥಗಳನ್ನು ತುಂಬುವ ಮೂಲಕ ದೇಶ ಮತ್ತು ಅದರ ಅಸ್ಮಿತೆಗೆ ಹಾನಿ ಮಾಡುವ ಪ್ರಯತ್ನಗಳು ಅನೇಕ ವರ್ಷಗಳಿಂದ ನಡೆಯುತ್ತಿವೆ’ ಎಂದು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.