ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರೀಕ್ಷೆ ಹೆಚ್ಚಿದರೂ ಕೋವಿಡ್–19 ಪಾಸಿಟಿವ್ ಪ್ರಮಾಣ ಇಳಿಕೆ: ಸರ್ಕಾರ

Last Updated 26 ಆಗಸ್ಟ್ 2020, 4:21 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್–19 ಪರೀಕ್ಷೆಯನ್ನು ಗಣನೀಯವಾಗಿ ಹೆಚ್ಚಿಸಲಾಗಿದ್ದರೂ ಸೋಂಕು ದೃಢಪಡುತ್ತಿರುವ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. ದಿನವೊಂದರಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇದೇ ಮೊದಲ ಬಾರಿಗೆ 6,423ರಷ್ಟು ಇಳಿಕೆಯಾಗಿರುವುದನ್ನು ಸಚಿವಾಲಯ ಉಲ್ಲೇಖಿಸಿದೆ.

ವಯಸ್ಸು ಮತ್ತು ಲಿಂಗದ ಆಧಾರದಲ್ಲಿ ಕೋವಿಡ್–19 ಸಾವಿನ ಪ್ರಮಾಣ ವಿಶ್ಲೇಷಿಸಿದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ಕೊರೊನಾ ಮರಣ ಪ್ರಮಾಣ ಪುರುಷರಲ್ಲಿ ಶೇ 69 ಹಾಗೂ ಮಹಿಳೆಯರಲ್ಲಿ ಶೇ 31ರಷ್ಟಿದೆ ಎಂದಿದ್ದಾರೆ.

‘ಶೇ 36ರಷ್ಟು ಸಾವು 45–60 ವರ್ಷ ವಯಸ್ಸಿನವರಲ್ಲಿ, 60 ಮತ್ತು ಅದಕ್ಕಿಂತ ಹೆಚ್ಚು ಪ್ರಾಯದವರಲ್ಲಿ ಶೇ 51ರಷ್ಟು ಸಾವು ಸಂಭವಿಸಿದೆ. ಶೇ 11ರಷ್ಟು ಸಾವು 26–44 ಪ್ರಾಯದವರಲ್ಲಿ ಸಂಭವಿಸಿದ್ದರೆ, ಶೇ 1ರಷ್ಟು ಮರಣ 18–25ರ ವಯೋಮಾನದವರಲ್ಲಿ ಹಾಗೂ 17 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಂಭವಿಸಿದೆ’ ಎಂದು ಅವರು ತಿಳಿಸಿದ್ದಾರೆ.

ಆರಂಭದಲ್ಲಿ ಪ್ರತಿ 10 ಲಕ್ಷ ಜನರಲ್ಲಿ 363 ಜನರನ್ನು ಪರೀಕ್ಷೆಗೆ ಒಳಪಡಿಸುತ್ತಿದ್ದರೆ, ಆಗಸ್ಟ್ 1ರ ವೇಳೆಗೆ ಈ ಸಂಖ್ಯೆ 600ಕ್ಕೂ ಹೆಚ್ಚುಆಗಿದೆ. ಈವರೆಗೆ ದೇಶದಲ್ಲಿ 3.7 ಕೋಟಿ ಕೊರೊನಾ ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದೂ ಭೂಷಣ್ ಹೇಳಿದ್ದಾರೆ.

ಏಳು ದಿನಗಳ ಸರಾಸರಿಯಂತೆ ಆಗಸ್ಟ್ ಮೊದಲ ವಾರದಲ್ಲಿ ಶೇ 11ರಷ್ಟಿದ್ದ ಸೋಂಕು ದೃಢಪಡುವ ಪ್ರಮಾಣ ಈಗ 8ಕ್ಕೆ ಇಳಿಕೆಯಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT