ನವದೆಹಲಿ: ದೆಹಲಿಯಲ್ಲಿ ಮೂರನೇ ತರಗತಿ ವಿದ್ಯಾರ್ಥಿಗಳ ಶೈಕ್ಷಣಿಕ ಸಾಮರ್ಥ್ಯ ಬಲಪಡಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯು (ಎನ್ಸಿಇಆರ್ಟಿ) ಮೂಲಭೂತ ಕಲಿಕಾ ಅಧ್ಯಯನ (ಎಫ್ಎಲ್ಸಿ) ನಡೆಸಲಿದೆ.

ಈ ಅಧ್ಯಯನವನ್ನು 2026ರ ಫೆಬ್ರುವರಿ–ಮಾರ್ಚ್ನಲ್ಲಿ ಆಯ್ದ ಮಾದರಿ ಶಾಲೆಗಳಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ದೆಹಲಿ ರಾಜ್ಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎಸ್ಸಿಇಆರ್ಟಿ) ತಿಳಿಸಿದೆ.

ಮೂರನೇ ತರಗತಿ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ಓದಲು, ಬರೆಯಲು ಮತ್ತು ಸಂಖ್ಯಾ ಕೌಶಲ್ಯಗಳನ್ನು ಅರ್ಥೈಸಿಕೊಂಡಿದ್ದಾರೆ, ಗ್ರಹಿಸಿದ್ದಾರೆ ಪಡೆದುಕೊಂಡಿದ್ದಾರೆ ಎಂಬುದನ್ನು ತಿಳಿಯಲು ಎಫ್ಎಲ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಇದು ಎಸ್ಸಿಇಆರ್ಟಿ ಮತ್ತು ಎನ್ಸಿಇಆರ್ಟಿ ಸಹಯೋಗದ ಉಪಕ್ರಮವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.