ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯ ಸರ್ಕಾರಿ ಶಾಲೆಗಳಿಗೆ ಟಾಪ್‌ ರ‍್ಯಾಂಕಿಂಗ್‌: ಕೇಜ್ರಿವಾಲ್‌ ಮೆಚ್ಚುಗೆ

Last Updated 12 ಅಕ್ಟೋಬರ್ 2022, 6:23 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಎರಡು ಸರ್ಕಾರಿ ಶಾಲೆಗಳು 'ಎಜುಕೇಷನ್‌ ವರ್ಲ್ಡ್‌' ಬಿಡುಗಡೆ ಮಾಡಿರುವ ರಾಷ್ಟ್ರದ ಟಾಪ್‌ 10 ಶಾಲೆಗಳ ಪಟ್ಟಿಯಲ್ಲಿ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್‌, ರಾಜ್ಯದ ಶೈಕ್ಷಣಿಕ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ರಾಜ್ಯ ಸರ್ಕಾರಗಳು ನಡೆಸುವ ಶಾಲೆಗಳ ಈ ಪಟ್ಟಿಯಲ್ಲಿ 5 ಶಾಲೆಗಳು ದೆಹಲಿಗೆ ಸೇರಿರುವುದು ವಿಶೇಷವಾಗಿದೆ. ದ್ವಾರಕಾದ ಸೆಕ್ಟರ್‌ 10ರಲ್ಲಿರುವ ಸರ್ಕಾರಿ ಶಾಲೆ ರಾಜಕೀಯ ಪ್ರತಿಭಾ ವಿಕಾಸ ವಿದ್ಯಾಲಯವು ಮೊದಲ ಸ್ಥಾನ ಪಡೆದಿದೆ. ಕಳೆದ ವರ್ಷವೂ ಈ ಶಾಲೆ ಮೊದಲ ಸ್ಥಾನದಲ್ಲಿತ್ತು. ಯಮುನಾ ವಿಹಾರದಲ್ಲಿರುವ ಸರ್ಕಾರಿ ಶಾಲೆ ರಾಜಕೀಯ ಪ್ರತಿಭಾ ವಿಕಾಸ ವಿದ್ಯಾಲಯವು ಎರಡನೇ ಸ್ಥಾನ ಪಡೆದಿದೆ. ಈ ಶಾಲೆ ಕಳೆದ ವರ್ಷ 9ನೇ ಸ್ಥಾನದಲ್ಲಿತ್ತು.

ನನ್ನ ಶೈಕ್ಷಣಿಕ ತಂಡದ ಬಗ್ಗೆ ಹೆಮ್ಮೆಯಾಗುತ್ತಿದೆ. ಮತ್ತೊಮ್ಮೆ ದೆಹಲಿಯ ಶಾಲೆಗಳು 'ಎಜುಕೇಷನ್‌ ವರ್ಲ್ಡ್‌'ನಲ್ಲಿ ಭಾರತದ ಅತ್ಯುತ್ತಮ ಸರ್ಕಾರಿ ಶಾಲೆಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದು ಅರವಿಂದ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ. ಇದೊಂದು ಸಾಧನೆ, ಅದ್ಭುತ ಹೆಜ್ಜೆ ಎಂದು ಬಣ್ಣಿಸಿದ್ದಾರೆ.

ಎಜುಕೇಷನ್‌ ವರ್ಲ್ಡ್‌ (ಇಡ್ಬ್ಳು) - ಇದು ಶಿಕ್ಷಣಕ್ಕಾಗಿ, ಶಿಕ್ಷಕರಿಗಾಗಿ ಮತ್ತು ಪೋಷಕರಿಗಾಗಿ ಇರುವ ವೆಬ್‌ ಪೋರ್ಟಲ್‌ ಆಗಿದೆ. ಪ್ರತಿ ವರ್ಷ ರಾಷ್ಟ್ರದ ಉತ್ತಮ ಶಾಲೆಗಳ ರ‍್ಯಾಂಕಿಂಗ್‌ ಪಟ್ಟಿಯನ್ನು ಬಿಡುಗಡೆ ಮಾಡುತ್ತದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಬೋರ್ಡಿಂಗ್‌ ಶಾಲೆಗಳು ಹೀಗೆ ವಿವಿಧ ವಿಭಾಗಗಳಡಿ ರ‍್ಯಾಂಕಿಂಗ್‌ ಪಟ್ಟಿಯನ್ನು ಸಿದ್ಧಪಡಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT