ನವದೆಹಲಿ: ಕೊರೊನಾ ಸೋಂಕಿನಿಂದ ಒಬ್ಬರುಅಥವಾ ಇಬ್ಬರೂ ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ದೆಹಲಿ ವಿಶ್ವವಿದ್ಯಾಲಯವು ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಸಮೀಕ್ಷೆ ನಡೆಸಿ, ಪೋಷಕರನ್ನು ಕಳೆದುಕೊಂಡ ವಿದ್ಯಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲು ವಿಶ್ವವಿದ್ಯಾಲಯವು ತನ್ನ ಅಡಿಯಲ್ಲಿ ಬರುವ ಕಾಲೇಜುಗಳಿಗೆ ಪತ್ರ ಬರೆದಿದೆ.

‘ಕೊರೊನಾ ವೈರಸ್‌ನಿಂದ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳ ಸಮೀಕ್ಷೆ ನಡೆಸಲು ದೆಹಲಿ ವಿಶ್ವವಿದ್ಯಾಲಯ ತನ್ನ ಕಾಲೇಜುಗಳಿಗೆ ಪತ್ರ ಬರೆದಿದೆ. ಸೋಮವಾರದ ವೇಳೆಗೆ ನಾವು ಈ ಕುರಿತು ವರದಿ ಕೋರಿದ್ದೇವೆ’ ಎಂದು ಕಾಲೇಜುಗಳ ಡೀನ್ ಬಲರಾಮ್ ಪಾನಿ ಪಿಟಿಐಗೆ ತಿಳಿಸಿದ್ದಾರೆ.

ಸಾಂಕ್ರಾಮಿಕ ರೋಗದ ಎರಡೂ ಅಲೆಗಳಲ್ಲಿ ಪೋಷಕರನ್ನು ಕಳೆದುಕೊಂಡಿರುವ ವಿದ್ಯಾರ್ಥಿಗಳಿಗೆ ಶೇಕಡಾ 100 ರಷ್ಟು ಶುಲ್ಕ ವಿನಾಯಿತು ಅನ್ವಯವಾಗುತ್ತದೆ. ಅವರಿಗೆ ಪರೀಕ್ಷಾ ಶುಲ್ಕವನ್ನು ಸಹ ವಿಧಿಸಲಾಗುವುದಿಲ್ಲ.

ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದವರ ಮಕ್ಕಳ ಮಾಹಿತಿ ನಮ್ಮ ಬಳಿ ಇದೆ. ಕಾಲೇಜು ಮಟ್ಟದಲ್ಲಿ ಕಾಲೇಜು ಆಡಳಿತ ಮಂಡಳಿಗಳು ಇದನ್ನು ಜಾರಿಗೊಳಿಸಬೇಕು. ಇದಕ್ಕಾಗಿ, ಅವರ ಬಳಿ ಕೆಲ ದಾಖಲೆಗಳನ್ನು ಕೇಳಲಾಗುತ್ತದೆ ಎಂದು ಹೆಸರೇಳಲಿಚ್ಛಿಸದ ವಿವಿ ಅಧಿಕಾರಿ ಹೇಳಿದ್ದಾರೆ.

ಅಧಿಕಾರಿಗಳ ಪ್ರಕಾರ, ದೆಹಲಿ ವಿಶ್ವವಿದ್ಯಾಲಯದ ಅಡಿಯಲ್ಲಿ ಮೂರು ರೀತಿಯ ಕಾಲೇಜುಗಳಿವೆ. ಟ್ರಸ್ಟ್‌ಗಳು ನಿರ್ವಹಿಸುವ ಕಾಲೇಜುಗಳು; ವಿಶ್ವವಿದ್ಯಾನಿಲಯವು ನಿರ್ವಹಿಸುವ ಕಾಲೇಜುಗಳು ಮತ್ತು ದೆಹಲಿ ಸರ್ಕಾರದಿಂದ ಸಂಪೂರ್ಣವಾಗಿ ಅಥವಾ ಭಾಗಶಃ ಅನುದಾನ ಪಡೆಯುವ ಕಾಲೇಜುಗಳಿವೆ.

ದೆಹಲಿ ಸರ್ಕಾರವು ಸಂಪೂರ್ಣವಾಗಿ ಅಥವಾ ಭಾಗಶಃ ಅನುದಾನ ಕೊಡುವ 28 ಕಾಲೇಜುಗಳನ್ನು ಹೊಂದಿದೆ, ಇದರಲ್ಲಿ 12 ಕಾಲೇಜುಗಳು ನಗರ ವಿತರಣೆಯಿಂದ ಸಂಪೂರ್ಣ ಅನುದಾನ ಪಡೆಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.